alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ ಮದುವೆ ವಿಡಿಯೋ ನೋಡಿ ಮಹಿಳೆ ಮಾಡಿದ್ಲು ಇಂಥ ಕೆಲಸ ..!

ರಾಜಸ್ತಾನದ ಜೈಪುರದಲ್ಲಿ ಆತಂಕಕಾರಿ  ಘಟನೆಯೊಂದು ನಡೆದಿದೆ. ವಿವಾಹಿತ ಮಹಿಳೆಯೊಬ್ಬಳು ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿರುವ ತನ್ನ ವಿಡಿಯೋ ನೋಡಿ ದಂಗಾಗಿದ್ದಾಳೆ. ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ವಾಸ್ತವವಾಗಿ ಈ ಮಹಿಳೆ ಮದುವೆ 2016ರಲ್ಲಿ ನಡೆದಿತ್ತು. ಮದುವೆಯ ವಿಡಿಯೋವೊಂದು ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿದೆ. ಮದುವೆ ವಿಡಿಯೋವನ್ನು ಎಡಿಟ್ ಮಾಡಿ ಹಾಕಲಾಗಿದೆ. ವಿದಾಯಿ ವೇಳೆ ವಧು ಅಳುತ್ತಿದ್ದ ದೃಶ್ಯವನ್ನು ಕೂಡ ಅಪ್ಲೋಡ್ ಮಾಡಲಾಗಿತ್ತು. ಯುಟ್ಯೂಬ್ ನಲ್ಲಿ ತನ್ನ ಮದುವೆಯ ವಿಡಿಯೋ ನೋಡಿ ಮಹಿಳೆ ಕಂಗಾಲಾಗಿದ್ದಾಳೆ.

ಮಹಿಳೆ ವಿಡಿಯೋ ನೋಡುವಷ್ಟರಲ್ಲಾಗಲೇ ಈ ವಿಡಿಯೋವನ್ನು 8 ಲಕ್ಷ ಜನರು ನೋಡಿದ್ದರು. 80 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದರು. ಕೆಲವರು ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಇದ್ರಿಂದ ನೊಂದ ಮಹಿಳೆ ಮನೆಯ ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ಬಂಧನವಾಗಿದ್ದು, ವಿಡಿಯೋ ಅಪ್ಲೋಡ್ ಮಾಡಿದ್ದ ವ್ಯಕ್ತಿ ಜೈಲು ಸೇರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...