alex Certify
ಕನ್ನಡ ದುನಿಯಾ       Mobile App
       

Kannada Duniya

ಅದಕ್ಕೊಪ್ಪದ ಯುವತಿಗೆ ಬೆಂಕಿ ಹಚ್ಚಿದ

fire maduve

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೆಚ್ಚಾಗಿದ್ದು, ಇದಕ್ಕೆ ಪೂರಕವಾದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದುವೆಯಾಗುವಂತೆ ಯುವತಿಯೊಬ್ಬಳಿಗೆ ಪೀಡಿಸುತ್ತಿದ್ದ ದುರುಳನೊಬ್ಬ ಆಕೆ ನಿರಾಕರಿಸಿದ್ದರಿಂದ ಬೆಂಕಿ ಹಚ್ಚಿದ್ದಾನೆ.

ಬೆಂಗಳೂರು ಜಾನಕಿರಾಮ್ ನಗರದ ನಿವಾಸಿ 26 ವರ್ಷದ ಅರುಣ್ ಎಂಬಾತನಿಗೆ ಹಗ್ಗ ಕಡಿಯುವ ಚಾಳಿ ಮೊದಲಿನಿಂದಲೂ ಇದ್ದು, ಈತ ಈ ಹಿಂದೆಯೇ ಎರಡು ಮದುವೆಯಾಗಿದ್ದ ಎನ್ನಲಾಗಿದೆ. ಮೂರನೇ ಮದುವೆಯಾಗಲು ಹವಣಿಸಿದ್ದ ಅರುಣ್ ತನ್ನ ಮನೆಯ ಸಮೀಪವೇ ವಾಸವಾಗಿದ್ದ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿದ್ದಾನೆ. ಈತನ ಮರ್ಮ ಅರಿಯದ ಯುವತಿಯೂ ಪ್ರೀತಿಸಿದ್ದಾಳೆ. ಕೊನೆಗೆ ಈತನ ಚಾಳಿ ಗೊತ್ತಾಗಿದ್ದರಿಂದ ಮದುವೆಯಾಗಲು ನಿರಾಕರಿಸಿದ್ದಾಳೆ.

ಈತ ಮದುವೆಯಾಗಲೇಬೇಕೆಂದು ಕಾಟ ಕೊಟ್ಟಿದ್ದರಿಂದ ಯುವತಿ ರಾಮಮೂರ್ತಿ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ. ಅಲ್ಲಿಗೂ ಬಂದು ಅರುಣ್ ಮದುವೆಯಾಗಬೇಕೆಂದು ಒತ್ತಾಯಿಸಿದ್ದು, ಯುವತಿ ನಿನಗೆ ಈಗಾಗಲೇ ಎರಡು ಮದುವೆಯಾಗಿರುವುದರಿಂದ ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ.

ಯುವತಿ ಮದುವೆಗೆ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ದುರುಳ ಆಕೆಯ ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಯುವತಿ ಕಿರುಚಾಡಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಬಂದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಯುವತಿ ನೀಡಿದ ಹೇಳಿಕೆ ಆಧರಿಸಿ ಕ್ರಮಕೈಗೊಂಡಿರುವ ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...