alex Certify
ಕನ್ನಡ ದುನಿಯಾ       Mobile App
       

Kannada Duniya

ಮುಗ್ಧ ಯುವತಿಯರ ‘ಕಲ್ಯಾಣ’ವೇ ಈತನ ಖಯಾಲಿ

arrest marriage

ಹೈದರಾಬಾದ್: ಹೆಣ್ಣುಮಕ್ಕಳನ್ನು ವಂಚಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಚಪಲ ಚೆನ್ನಿಗರಾಯನೊಬ್ಬನನ್ನು ಹೈದರಾಬಾದ್ ಮಾದಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾಗಿದ್ದಾನೆ ಎನ್ನಲಾಗಿದೆ.

ಶ್ರೀಕಲ್ಯಾಣ್ ಎಂಬ ವ್ಯಕ್ತಿಯೊಬ್ಬ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದ. ಈತನ ನಡೆಯಿಂದ ಬೇಸರಗೊಂಡ ಪತ್ನಿ ಹೈದರಾಬಾದ್ ಮಾದಾಪುರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಸರ್ಕಾರಿ ಅಧಿಕಾರಿಯಾಗಿದ್ದು, ಕೆಲಸ ಕೊಡಿಸುತ್ತೇನೆ ಎಂದು ಹಣ ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ. ಈತನ ಬಂಧನದ ಸುದ್ದಿ ತಿಳಿಯುತ್ತಲೇ ಮೊದಲ ಪತ್ನಿಯೂ ಠಾಣೆಗೆ ಎಂಟ್ರಿ ಕೊಟ್ಟಿದ್ದಾಳೆ.

ಪ್ರೊಫೆಸರ್ ಎಂದು ಹೇಳಿ ನನ್ನನ್ನು ಮದುವೆಯಾಗಿ ಪರಾರಿಯಾಗಿದ್ದವ ಈಗ ಸಿಕ್ಕಿದ್ದಾನೆ ಎಂದು ದೂರಿದ್ದಾರೆ. ಈಗಾಗಲೇ ಇಬ್ಬರನ್ನು ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿರುವ ಶ್ರೀಕಲ್ಯಾಣ್ ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ಇನ್ನೆರಡು ಮದುವೆಯಾಗಿದ್ದಾನೆ ಎಂದು ಹೇಳಲಾಗಿದೆ.

ಮುಗ್ಧ ಹೆಣ್ಣುಮಕ್ಕಳನ್ನು, ನಿರುದ್ಯೋಗಿಗಳನ್ನು ವಂಚಿಸುತ್ತಿದ್ದ ಶ್ರೀಕಲ್ಯಾಣ್ ಅವರಿಂದ ಹಣ, ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ. ಅಮಾಯಕ ಹೆಣ್ಣುಮಕ್ಕಳನ್ನು ವಂಚಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತನ ಇಬ್ಬರು ಪತ್ನಿಯರೂ ಮಾದಾಪುರ ಠಾಣೆಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...