alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿಗಳಿಗೆ ನಡೀತು ಹೆಚ್ ಐ ವಿ ಪರೀಕ್ಷೆ

ಮಧ್ಯಪ್ರದೇಶದ ಮಂದಸೌರದಲ್ಲಿ 7 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳಿಗೆ ಹೆಚ್ ಐ ವಿ ಪರೀಕ್ಷೆ ನಡೆದಿದೆ. ಈ ಇಬ್ಬರು ಆರೋಪಿಗಳು ಸಾಕಷ್ಟು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಶಂಕೆ ಪೊಲೀಸರಿಗಿದೆ. ಹೆಚ್ ಐ ವಿ ಪರೀಕ್ಷೆ ವರದಿ ಬಂದ ನಂತ್ರ ಬಾಲಕಿಗೆ ವಿಶೇಷ ಚಿಕಿತ್ಸೆ ನೀಡುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಪೀಡಿತೆಗೆ ಇಂದೋರ್ ನ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಾಣ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕಿ ಸಂಪೂರ್ಣ ಗುಣಮುಖವಾಗಲು ಸುಮಾರು 2 ವಾರಗಳು ಬೇಕೆಂದು ವೈದ್ಯರು ಹೇಳಿದ್ದಾರೆ.

ಬುಧವಾರ ಶಾಲೆ ಮುಗಿಸಿ ನಿಂತಿದ್ದ ಬಾಲಕಿಗೆ ಸಿಹಿ ತಿಂಡಿ ನೀಡುವ ಆಸೆ ತೋರಿಸಿ ಇಬ್ಬರು ಆರೋಪಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದರು. ಬಾಲಕಿ ಖಾಸಗಿ ಅಂಗಕ್ಕೆ ಕಬ್ಬಿಣದ ರಾಡ್ ಹಾಕಿದ್ದರು. ಬಾಲಕಿ ಮೃತಪಟ್ಟಿದ್ದಾಳೆಂದು ಆಕೆಯನ್ನು ಎಸೆದು ಹೋಗಿದ್ದರು. ಮರುದಿನ ಬಾಲಕಿ ರಕ್ತದ ಮಡುವಿನಲ್ಲಿ ಸಿಕ್ಕಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...