alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗರೇಟ್ ಸೇದಲು ಕಲಿಸಿದ್ದಕ್ಕೆ ನಡೆಯಿತು ಹತ್ಯೆ…!

ದೆಹಲಿಯಲ್ಲಿ 25 ವರ್ಷದ ಯುವಕನೊಬ್ಬ ತನ್ನ ಸಹೋದ್ಯೋಗಿಯನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಇದಕ್ಕೆ ಕಾರಣ ಏನು ಗೊತ್ತಾ? ಧೂಮಪಾನ. ಹೌದು ಕೊಲೆಯಾದ ವ್ಯಕ್ತಿಯೇ ಈ ಯುವಕನಿಗೆ ಧೂಮಪಾನದ ಚಟ ಅಂಟಿಸಿದ್ದ. ಮೊದಲು ಸಿಗರೇಟ್ ರುಚಿ ತೋರಿಸಿದ್ದ. ಆ ಚಟಕ್ಕೆ ಬಿದ್ದ ಯುವಕನಿಗೆ ಈಗ ಗಂಟಲು ಕ್ಯಾನ್ಸರ್ ಆವರಿಸಿದೆ.

ಹಂತಕ ಮುಸ್ತಾಕೀಮ್ ಅಹ್ಮದ್ ದೆಹಲಿಯ ರೆಸ್ಟೋರೆಂಟ್ ಒಂದ್ರಲ್ಲಿ ಅಡುಗೆ ಕೆಲಸ ಮಾಡ್ತಾನೆ. ಕೊಲೆಯಾದ ಯುವಕ ಇನಾಯತ್ ಕೂಡ ಕಳೆದ 18 ತಿಂಗಳುಗಳಿಂದ ಅದೇ ಹೋಟೆಲ್ ನಲ್ಲಿ ಅಡುಗೆಯವನಾಗಿದ್ದ. ಅದು ಅಹ್ಮದ್ ಭಾವನ ಹೋಟೆಲ್ ಆಗಿತ್ತು.

ಅಹ್ಮದ್ ಹಾಗೂ ಇನಾಯತ್ ಒಳ್ಳೆ ಸ್ನೇಹಿತರಾಗಿದ್ರು. ಆದ್ರೆ ಚುರುಕಿನ ಕೆಲಸಗಾರನಾಗಿದ್ದ ಇನಾಯತ್ ಎಲ್ಲರ ಮೆಚ್ಚುಗೆ ಗಳಿಸಿದ್ದ. ಇದು ಅಹ್ಮದ್ ನನ್ನು ಕೆರಳಿಸಿತ್ತು. ಇನಾಯತ್ ಜೊತೆ ಸೇರಿ ಅಹ್ಮದ್ ಕೂಡ ಸಿಗರೇಟ್ ಸೇದಲು ಆರಂಭಿಸಿದ್ದ. ಅವನೊಬ್ಬ ಚೈನ್ ಸ್ಮೋಕರ್ ಆಗಿ ಬದಲಾಗಿದ್ದ.

ಕೊನೆಗೆ ಆರೋಗ್ಯವೂ ಕೈಕೊಟ್ಟಿತ್ತು. ಅತಿಯಾದ ಧೂಮಪಾನದಿಂದ ಗಂಟಲು ಕ್ಯಾನ್ಸರ್ ಆವರಿಸಿದೆ ಅಂತಾ ವೈದ್ಯರು ತಿಳಿಸಿದ್ರು. ಇನಾಯತ್ ನಿಂದಾಗಿಯೇ ತನಗೆ ಕ್ಯಾನ್ಸರ್ ಬಂದಿದೆ ಅನ್ನೋ ಕೋಪ ಅಹ್ಮದ್ ಗಿತ್ತು. ಬರಬರುತ್ತಾ ಸರಿಯಾಗಿ ಕೆಲಸವನ್ನೂ ಮಾಡದೇ ಇದ್ದಿದ್ರಿಂದ, ಹೋಟೆಲ್ ಮಾಲೀಕರು ಆತನನ್ನು ಕಿತ್ತು ಹಾಕಿದ್ರು.

ಉತ್ತರ ಪ್ರದೇಶಕ್ಕೆ ಮರಳಿದ ಅಹ್ಮದ್ ಅಲ್ಲಿ ಕಂಟ್ರಿ ಪಿಸ್ತೂಲ್ ಖರೀದಿಸಿ, ಶೂಟಿಂಗ್ ಅಭ್ಯಾಸ ಮಾಡಿದ್ದ. ಕಳೆದ ವಾರ ಹೋಟೆಲ್ ಗೆ ಬಂದು ಇನಾಯತ್ ನನ್ನು ಕೆಲಸದಿಂದ ತೆಗೆದುಹಾಕುವಂತೆ ಭಾವನ ಬಳಿ ಕೇಳಿದ್ದ. ಆತ ಒಪ್ಪದೇ ಇದ್ದಾಗ ಇನಾಯತ್ ಮೇಲೆ ಗುಂಡು ಹಾರಿಸಿದ್ದಾನೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಇನಾಯತ್ ಮೃತಪಟ್ಟಿದ್ದಾನೆ. ಆರೋಪಿ ಅಹ್ಮದ್ ನನ್ನು ಪೊಲೀಸರು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...