alex Certify
ಕನ್ನಡ ದುನಿಯಾ       Mobile App
       

Kannada Duniya

200 ರೂ.ಗೆ 2 ವರ್ಷದ ಮಗು ಮಾರಿದ ಮಹಾತಾಯಿ

man_tircyd5

ತ್ರಿಪುರಾದ ಬುಡಕಟ್ಟು ಕುಟುಂಬದ ಮಹಿಳೆಯೊಬ್ಬಳ ಮೇಲೆ ಮಗು ಮಾರಿದ ಆರೋಪ ಕೇಳಿ ಬಂದಿದೆ. ಕೇವಲ 200 ರೂಪಾಯಿಗೆ 2 ವರ್ಷದ ಗಂಡ  ಮಗುವನ್ನು ಮಾರಾಟ ಮಾಡಿದ್ದಾಳೆ ಮಹಾತಾಯಿ. ಆಟೋ ರಿಕ್ಷಾ ಚಾಲಕನಿಗೆ ಮಗುವನ್ನು ಮಾರಾಟ ಮಾಡಿರುವ ವಿಷಯ ತಿಳಿದುಬಂದಿದೆ.

ಕಳೆದ 15 ದಿನಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಬಡತನದಿಂದ ಬಳಲಿರುವ ಬುಡಕಟ್ಟು ಜನಾಂಗದ ಮಹಿಳೆಯರು ಮಕ್ಕಳನ್ನು ಮಾರಾಟ ಮಾಡ್ತಿದ್ದಾರೆ. ಮಗು ಮಾರಾಟದ ಬಗ್ಗೆ ಮಗುವಿನ ತಂದೆ ಹೇಳಿಕೆ ನೀಡಿದ್ದಾನೆ. ಮಗು ಮಾರಾಟ ಮಾಡದಂತೆ ಪತ್ನಿಗೆ ಹೇಳಿದ್ದೆ. ಆದ್ರೆ ಆಕೆ ಕೇಳಲಿಲ್ಲ ಎಂದು ಆತ ಹೇಳಿಕೆ ನೀಡಿದ್ದಾನೆ.

ಮಗು ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಮಗು ವಾಪಸ್ ಪಡೆಯುವಂತೆ ಎಲ್ಲರೂ ಆಗ್ರಹಿಸಿದ್ರು. ಮಗು ನೀಡಿದ ಕುಟುಂಬವನ್ನು ಭೇಟಿಯಾಗಿ ಮಗು ವಾಪಸ್ ಮಾಡುವಂತೆ ಕೇಳಲಾಯ್ತು. ಆದ್ರೆ ಮಗುವನ್ನು ವಾಪಸ್ ನೀಡಿಲ್ಲ. ತಾಯಿಗೆ ಮಗು ನೀಡುವುದಾಗಿ ಹೇಳಿದ್ದಾರೆಂದು ಮಗುವಿನ ತಂದೆ ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...