alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಪ್ರೇಯಸಿ ಹತ್ಯೆ ಮಾಡಿದ ಯುವಕ

ಉತ್ತರ ಪ್ರದೇಶದ ನೋಯ್ಡಾದಲ್ಲಿ ಲಿವ್ ಇನ್ ನಲ್ಲಿ ವಾಸವಾಗಿದ್ದ ಯುವಕನೊಬ್ಬ ಪ್ರೇಮಿಯ ಹತ್ಯೆ ಮಾಡಿದ್ದಾನೆ. ಮದುವೆಯಾಗುವಂತೆ ಒತ್ತಾಯ ಮಾಡ್ತಿದ್ದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಪ್ರೇಮಿಯನ್ನು ಯುವಕ ಹತ್ಯೆ ಮಾಡಿದ್ದಾನೆ. ಶವ ನೋಯ್ಡಾದ ಸೆಕ್ಟರ್ 100ರಲ್ಲಿ ಸಿಕ್ಕಿದೆ.

ಸುಜಾತಾ ಹಾಗೂ ಭರತ್ ಲಿವ್ ಇನ್ ನಲ್ಲಿದ್ದರು ಎನ್ನಲಾಗಿದೆ. ಭರತ್ ಗೆ ಆತನ ಕುಟುಂಬಸ್ಥರು ಬೇರೆ ಮದುವೆ ಗೊತ್ತು ಮಾಡಿದ್ದರಂತೆ. ಸುಜಾತಾ ತನ್ನನ್ನೇ ಮದುವೆಯಾಗುವಂತೆ ಒತ್ತಾಯ ಮಾಡ್ತಿದ್ದಳಂತೆ. ಶನಿವಾರ ಸುಜಾತಾಳನ್ನು ಹತ್ಯೆ ಮಾಡಿ ಸೆಕ್ಟರ್ 100ರಲ್ಲಿ ಎಸೆದು ಹೋಗಿದ್ದಾನೆ.

ಅಪರಿಚಿತ ಶವವನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆಗ ಕೊಲೆ ಎಂಬುದು ಗೊತ್ತಾಗಿದೆ. ಶಂಕೆ ಮೇರೆಗೆ ಭರತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಭರತ್ ತಪ್ಪೊಪ್ಪಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಸುಜಾತಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...