alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಗ್ಲೀಷ್ ಭಾಷೆಯ ಕಾರಣಕ್ಕೆ ನಡೆದಿದೆ ಯುವಕನ ಹತ್ಯೆ

ಮುಂಬೈನಲ್ಲಿ 21 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನಿಗೆ 54 ಬಾರಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ. ಆತನ ಕತ್ತನ್ನು ಸೀಳಿ ಹಾಕಿದ್ದಾನೆ. ಅದಾದ್ಮೇಲೆ ಶಾಹು ನಗರ ಪೊಲೀಸ್ ಠಾಣೆಗೆ ಬಂದ ಹಂತಕ ಅಮೀರ್ ಅಬ್ದುಲ್ ವಾಹಿದ್ ರಾಹಿನ್ ತಪ್ಪೊಪ್ಪಿಕೊಂಡಿದ್ದಾನೆ.

ಕೊಲೆಯಾದ ಯುವಕ, 18 ವರ್ಷದ ಮೊಹಮ್ಮದ್ ಅಫ್ರೋಜ್ ಅಲಂ ಶೇಖ್. ಆರೋಪಿ ಅಮೀರ್ ಹೆಚ್ಚು ಓದಿಲ್ಲ, ಹಾಗಾಗಿ ಆತನಿಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಇದೇ ವಿಚಾರ ಇಟ್ಟುಕೊಂಡು ಅಫ್ರೋಜ್ ಆತನಿಗೆ ಚುಡಾಯಿಸುತ್ತಿದ್ದನಂತೆ.

ಸದಾ ಇಂಗ್ಲಿಷ್ ನಲ್ಲೇ ಮಾತನಾಡುವ ಮೂಲಕ ಅಮೀರ್ ಬಗ್ಗೆ ಅಫ್ರೋಜ್ ಹಾಸ್ಯ ಮಾಡುತ್ತಿದ್ದ. ಇದು ಅಮೀರ್ ನನ್ನು ಕೆರಳಿಸಿತ್ತು. ಸುಮಾರು ಒಂದು ವಾರದ ಹಿಂದೆಯೇ ಗೆಳೆಯನನ್ನು ಹತ್ಯೆ ಮಾಡಲು ಅಮೀರ್ ಸಂಚು ರೂಪಿಸಿದ್ದ.

ಮದ್ಯ ಕೊಡಿಸೋದಾಗಿ ಹೇಳಿ ಬುಧವಾರ ರಾತ್ರಿ ಅಮೀರ್, ಅಫ್ರೋಜ್ ನನ್ನು ಬಾಂದ್ರಾಗೆ ಕರೆದುಕೊಂಡು ಬಂದಿದ್ದ. ಟಾಯ್ಲೆಟ್ ಒಂದರ ಬಳಿ ಕುಳಿತು ಇಬ್ಬರೂ ಬಿಯರ್ ಕುಡಿಯಲು ಮುಂದಾಗಿದ್ದಾರೆ. ಆಗ ಅಮೀರ್, ಚಾಕುವಿನಿಂದ ಅಫ್ರೋಜ್ ನ ಕತ್ತನ್ನು ಸೀಳಿದ್ದಾನೆ.

ಆತ ಕೆಳಕ್ಕೆ ಬೀಳುತ್ತಿದ್ದಂತೆ 54 ಬಾರಿ ಅವನಿಗೆ ಚಾಕುವಿನಿಂದ ಇರಿದಿದ್ದಾನೆ. ತಡರಾತ್ರಿ 1 ಗಂಟೆ ವೇಳೆಗೆ ಠಾಣೆಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಮಧುಬನಿ ಮೂಲದ ಅಮೀರ್ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲೆಂದು 2 ವರ್ಷದ ಹಿಂದೆ ಮುಂಬೈಗೆ ಬಂದಿದ್ದ. ಆದ್ರೆ ಪರೀಕ್ಷೆಗೇ ಹಾಜರಾಗಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...