alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತಿಗೆಯ ಮದುವೆಯಾದ ಮೈದುನ ಮಧ್ಯರಾತ್ರಿ ಗುಂಡಿಟ್ಟ

ಮದುವೆಯಾಗಿ ಎರಡು ವರ್ಷಗಳ ನಂತ್ರ ಪ್ರೀತಿ ಪತಿ ಜಸ್ಬೀರ್ ಅನುಮಾನಾಸ್ಪದವಾಗಿ ಕಣ್ಮರೆಯಾಗಿದ್ದ. ಐದು ವರ್ಷಗಳಾದ್ರೂ ಆತನ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಮಗ ಮನೆಗೆ ವಾಪಸ್ ಬರದಿರುವುದನ್ನು ನೋಡಿದ ಕುಟುಂಬಸ್ಥರು ಎರಡನೇ ಮಗ ಜಿತೇಂದ್ರನಿಗೆ ಅತ್ತಿಗೆ ಜವಾಬ್ದಾರಿ ನೀಡಿದ್ರು. ಆದ್ರೆ ಶನಿವಾರ ರಾತ್ರಿ ಜಿತೇಂದ್ರ ಮಾಡಿದ ಕೆಲಸದಿಂದ ಇಡೀ ಕುಟುಂಬ ಅನಾಥವಾಗಿದೆ.

ಪ್ರೀತಿ ಹಾಗೂ ಜಿತೇಂದ್ರನಿಗೆ ಮೂವರು ಮಕ್ಕಳಿವೆ. ಒಂದು ಮಗು ವಯಸ್ಸು ಇನ್ನೂ ಒಂದುವರೆ ವರ್ಷ. ಮಗುವಿಗೆ ತನ್ನ ತಾಯಿ ಹೆಸರು ಹೇಳಲೂ ಬರೋದಿಲ್ಲ. ಶನಿವಾರ ರಾತ್ರಿ ಮನೆಯವರೆಲ್ಲ ಇನ್ನೊಬ್ಬ ಮಗಳ ಹುಟ್ಟುಹಬ್ಬ ಆಚರಿಸಿದ್ದರು. ಕೇಕ್ ಕತ್ತರಿಸಿ ಊಟ ಮಾಡಿದ ನಂತ್ರ ಎಲ್ಲರೂ ಮಲಗಿದ್ದರು. ಜಿತೇಂದ್ರ ಮಾತ್ರ ಕೆಲಸದ ನೆಪ ಹೇಳಿ ಪತ್ನಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದ.

ಮಧ್ಯ ರಾತ್ರಿ ಗುಂಡಿನ ಶಬ್ಧ ಕೇಳಿದೆ. ಸ್ಥಳಕ್ಕೆ ಬಂದು ನೋಡಿದಾಗ ಜಿತೇಂದ್ರ ಹಾಗೂ ಪ್ರೀತಿ ನೆಲಕ್ಕೆ ಬಿದ್ದಿದ್ದರು. ಪ್ರೀತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜಿತೇಂದ್ರ ಆಸ್ಪತ್ರೆಯಲ್ಲಿದ್ದಾನೆ. ಆದ್ರೆ ಈ ಸಾವಿಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪತಿ, ಪತ್ನಿಗೆ ಗುಂಡಿಟ್ಟು ನಂತ್ರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...