alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನೇ ಗರ್ಭಿಣಿಯಾಗಿಸಿದ ತಂದೆ

Rape mj mar4

ಹೆಣ್ಣುಮಕ್ಕಳಿಗೆ ಯಾರಿಂದಲಾದರೂ ತೊಂದರೆಯಾದರೆ ಮನೆಯಲ್ಲಿ ಪೋಷಕರಿಗೆ ತಿಳಿಸುತ್ತಾರೆ. ಆದರೆ, ಪೋಷಕರಿಂದಲೇ ತೊಂದರೆಯಾದರೆ ಯಾರಿಗೆ ಹೇಳಬೇಕು. ಸರಿ ಎಂದು ಪಂಚಾಯಿತಿಯವರ ಬಳಿ ನ್ಯಾಯ ಕೇಳಲು ಹೋದರೆ ಅಲ್ಲಿ ಸಿಕ್ಕಿದ್ದು, ಶಿಕ್ಷೆಯೇ.

ತಂದೆಯೇ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಮಹಾರಾಷ್ಟ್ರದ ಸತಾರ ಜಿಲ್ಲೆಯ ಪಂಚ್ವಾಡ್ ಎಂಬ ಗ್ರಾಮದಲ್ಲಿ ನಡೆದಿದೆ. ಕಾಮುಕನ ಪತ್ನಿ ತೀರಿಹೋಗಿದ್ದು, ಮನೆಯಲ್ಲಿ ಅಪ್ರಾಪ್ತ ಮಗಳೊಂದಿಗೆ ವಾಸವಾಗಿದ್ದ. ಮನೆಯಲ್ಲಿದ್ದ ಒಂಟಿ ಮಗಳನ್ನು ಬೆದರಿಸಿ 4 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ವಿಚಾರ ಹಳ್ಳಿಯ ಪಂಚಾಯಿತಿ ಮುಖಂಡರಿಗೆ ಗೊತ್ತಾಗಿ ಪಂಚಾಯಿತಿ ನಡೆಸಿ ತೀರ್ಪು ನೀಡಿದ್ದಾರೆ.

ಅದರಂತೆ ಮಗಳ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಹಾಗೂ ಅಪ್ಪನಿಂದ ಅತ್ಯಾಚಾರ ನಡೆದರೂ ಮುಚ್ಚಿಟ್ಟಿದ್ದ ಅಪ್ರಾಪ್ತೆ ಗರ್ಭಿಣಿಗೆ ಮನಬಂದಂತೆ ಥಳಿಸಿದ್ದಾರೆ. ಅಪ್ಪನಿಂದ ಅನ್ಯಾಯಕ್ಕೆ ಒಳಗಾದ ಬಾಲಕಿಗೆ ನ್ಯಾಯ ಕೊಡಿಸಬೇಕಾದ ಪಂಚಾಯಿತಿ ಮುಖಂಡರೇ ಕ್ರೂರವಾಗಿ ವರ್ತಿಸಿದ್ದಾರೆ.

ಈ ವಿಷಯ ಗೊತ್ತಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗ್ರಾಮಕ್ಕೆ ಬಂದು ಮಾಹಿತಿ ಪಡೆದುಕೊಂಡ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಬಾಲಕಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...