alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷದ ಬಾಲಕಿ ಮೇಲೆ 250 ಬಾರಿ ಅತ್ಯಾಚಾರ

ಅಮೆರಿಕದಲ್ಲಿ ಕಾಮಾಂಧನೊಬ್ಬನ ಪೈಶಾಚಿಕ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈತ ಬಾಲಕಿ ಮೇಲೆ 5 ವರ್ಷಗಳ ಕಾಲ ನಿರಂತರ ಅತ್ಯಾಚಾರ ಮಾಡಿದ್ದಾನೆ. 250 ಬಾರಿ ಆತ ದೌರ್ಜನ್ಯ ಎಸಗಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

41 ವರ್ಷದ ರಿಚರ್ಡ್ ಅಲಿಯಾಸ್ ರಿಕಿ ವೈಟ್ ಈ ನೀಚ ಕೃತ್ಯ ಎಸಗಿದ ಕಾಮುಕ. ಆತನನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ. 2012ರಲ್ಲೇ ಈತ 12 ವರ್ಷದ ಬಾಲೆ ಮೇಲೆ ಕಾಮದ ಕಣ್ಣು ಹಾಕಿದ್ದ. ಅವಳೊಂದಿಗೆ ಚಾಟಿಂಗ್ ಮೂಲಕ ಸ್ನೇಹ ಬೆಳೆಸಿದ್ದ.

ಶಾಲೆಯಿಂದ ಅವಳನ್ನು ನೇರವಾಗಿ ತನ್ನ ಮನೆಗೆ ಕರೆತಂದು, ಅವಳ ಮೇಲೆ ಅತ್ಯಾಚಾರ ಮಾಡುತ್ತಿದ್ದ. 5 ವರ್ಷಗಳ ಕಾಲ ಈ ಕೃತ್ಯವನ್ನು ಮುಂದುವರಿಸಿದ್ದ. ತನ್ನ ಕೃತ್ಯವನ್ನೆಲ್ಲ ವಿಡಿಯೋ ಮಾಡಿಟ್ಟುಕೊಂಡಿದ್ದ. ಬಾಲಕಿ ಕೂಡ ಅವನನ್ನು ನಂಬಿದ್ದಳು.

ಆದ್ರೆ ನಂತರ ಅವನ ಅಸಲಿಯತ್ತು ಗೊತ್ತಾಗ್ತಿದ್ದಂತೆ ಆತನಿಂದ ದೂರವಾಗಲು ಯತ್ನಿಸಿದ್ದಾಳೆ. ಆದ್ರೆ ಆತ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಅವಳನ್ನು ಬ್ಲಾಕ್ ಮೇಲ್ ಮಾಡಿದ್ದ. ಅಷ್ಟೇ ಅಲ್ಲ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿದ್ದ. ಕೊನೆಗೆ ಸ್ನೇಹಿತರ ಸಹಾಯದಿಂದ ಬಾಲಕಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...