alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿಯಾಗಿ ನಂಬಿದ ಸ್ನೇಹಿತನೇ ದ್ರೋಹ ಬಗೆದ

ಕಣ್ಣು ಮುಚ್ಚಿ ಸ್ನೇಹಿತನನ್ನು ನಂಬುತ್ತಿದ್ದ ಪೀಡಿತೆಯ ಪತಿಗೆ ದ್ರೋಹ ಬಗೆದಿದ್ದಾನೆ ಸ್ನೇಹಿತ. ಹರಿದ್ವಾರದಲ್ಲಿ ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿದ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ.

ಪಾನೀಯದಲ್ಲಿ ಪ್ರಜ್ಞೆ ತಪ್ಪುವ ಔಷಧಿ ನೀಡಿ ತನ್ನ ಕೆಲಸ ಸಾಧಿಸಿದ್ದಾನೆ ಸ್ನೇಹಿತ. ಕೋರ್ಟ್ ಆದೇಶದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ಮಾಡ್ತಿದ್ದಾರೆ. ಪೀಡಿತ ಮಹಿಳೆ ಪತಿ ಅಂಗಡಿ ನಡೆಸುತ್ತಿದ್ದಾನೆ. ಅದೇ ಊರಿನ ಆತನ ಸ್ನೇಹಿತ ಕೂಡ ಪತಿ ವ್ಯಾಪಾರದಲ್ಲಿ ಕೈ ಜೋಡಿಸಿದ್ದಾನೆ. ಪತಿ ಸ್ನೇಹಿತ ಎನ್ನುವ ಕಾರಣಕ್ಕೆ ಆಗಾಗ ಮನೆಗೆ ಬರ್ತಿದ್ದ ಎನ್ನಲಾಗಿದೆ.

ಪೀಡಿತೆ ಪತಿ ಇಲ್ಲದ ಸಮಯ ನೋಡಿ ಮನೆಗೆ ಬಂದ ಸ್ನೇಹಿತ ಪಾನೀಯಕ್ಕೆ ಪ್ರಜ್ಞೆ ತಪ್ಪುವ ಮದ್ದು ಹಾಕಿದ್ದಾನೆ. ಅತ್ಯಾಚಾರದ ವಿಡಿಯೋ ಕೂಡ ಮಾಡಿದ್ದಾನೆ. ಪೀಡಿತ ಪತ್ನಿ ಹಾಗೂ ಪತಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ದೂರು ದಾಖಲಿಸುವಂತೆ ಪೊಲೀಸರಿಗೆ ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...