alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಹೆಸರಿನಲ್ಲಿ ಹಣ ದೋಚಲು ಮುಂದಾಗಿದ್ದ ಭೂಪ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಂದು ಸುಳ್ಳು ಹೇಳಿ ಬಿಜೆಪಿ ಕಾರ್ಪೊರೇಟರ್ ಬಳಿ ಎಂ ಎಲ್ ಸಿ ಸೀಟು ನೀಡಲು 10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಮಹಿಳೆಯೂ ಇದ್ದಾಳೆ.

ಆರ್. ಶಿರಗಾಂವ್ಕರ್ ಹಾಗೂ ಅನಿಲ್ ಕುಮಾರ್ ಎಂಬುವವರು ಬಿಜೆಪಿ ಕಾರ್ಪೊರೇಟರ್ ಮನೋಹರ್ ದಂಬ್ರೆ ಅವರನ್ನು ಭೇಟಿ ಮಾಡಿದ್ರು. ತಾವು ಸಿಎಂ ಫಡ್ನವಿಸ್ ಆಪ್ತರೆಂದು ಹೇಳಿಕೊಂಡಿದ್ದಾರೆ. 10 ಕೋಟಿ ರೂಪಾಯಿ ಕೊಟ್ರೆ ಎಂ ಎಲ್ ಸಿ ಸೀಟು ಕೊಡುವುದಾಗಿ ಸಿಎಂ ಹೇಳಿದ್ದಾರೆ.

ಇನ್ ಸ್ಟಾಲ್ಮೆಂಟ್ ನಲ್ಲಿ ಹಣ ಕೊಡಿ. ಈಗ 25 ಲಕ್ಷ ಕೊಟ್ಟು ಬಿಡಿ, ಪ್ರಮಾಣ ವಚನಕ್ಕೂ ಮುನ್ನ 4.75 ಕೋಟಿ ಹಾಗೂ ನಂತರ 5 ಕೋಟಿ ರೂಪಾಯಿ ಕೊಡಿ ಅಂತಾ ಕೇಳಿದ್ದರು. ಈ ಜಾಲದ ಕಿಂಗ್ ಪಿನ್ ಅನ್ಸಾರಿ ಎಂಬಾತ ಕಾರ್ಪೊರೇಟರ್ ಜೊತೆಗೆ ಫಡ್ನವಿಸ್ ಧ್ವನಿಯನ್ನು ಅನುಕರಿಸಿ, ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡಿದ್ದ.

ಕಾರ್ಪೊರೇಟರ್ ಗೆ ಅನುಮಾನ ಬಂದು ಕೂಡಲೇ ಕ್ರೈಂ ಬ್ರಾಂಚ್ ಗೆ ಮಾಹಿತಿ ನೀಡಿದ್ರು. ಹೋಟೆಲ್ ಒಂದರಲ್ಲಿ ದುಡ್ಡು ಕೊಡುವುವಾಗಿ ಹೇಳಿ ಖದೀಮರನ್ನು ಅಲ್ಲಿಗೆ ಕರೆಸಿದ್ರು. ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...