alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಬರ್ತ್ ಡೇ ಗಿಫ್ಟ್ ನೀಡಲು ಇಂಥ ಕೆಲಸ ಮಾಡಿದ….!

ದೆಹಲಿಯ ಮಂಕಿ ಪಾರ್ಕ್ ಸಮೀಪ ತುಘಲಕಾಬಾದ್ ಅರಣ್ಯದಲ್ಲಿ ನಡೆದ ಯುವಕನ ಹತ್ಯೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಬೇಧಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಕಾರಣ ತಿಳಿದ ಪೊಲೀಸರೇ ದಂಗಾಗಿದ್ದಾರೆ.

ಮುಖ್ಯ ಆರೋಪಿ ಸುರೇಂದ್ರ ತುಘಲಕಾಬಾದ್ ನಿವಾಸಿಯಾಗಿದ್ದಾನೆ. ಜನವರಿಯಲ್ಲಿ ಆತನ ಪತ್ನಿ ಹುಟ್ಟುಹಬ್ಬವಿತ್ತು ಎನ್ನಲಾಗಿದೆ. ಪತ್ನಿಗೆ ಬಂಗಾರ ಚೈನ್ ಗಿಫ್ಟ್ ನೀಡಲು ನಿರ್ಧರಿಸಿದ್ದ ಸುರೇಂದ್ರ ಲೂಟಿ ಶುರುಮಾಡಿದ್ದಾನೆ. ಈ ವೇಳೆ ಯುವಕನನ್ನು ಹತ್ಯೆ ಮಾಡಿದ್ದಾರೆ. ಹತ್ಯೆಗೆ ಬಳಸಿದ್ದ ಚಾಕು ಹಾಗೂ ಬಂಗಾರದ ಚೈನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ನಡೆದ ದಿನ ಸುರೇಂದ್ರ ಹಾಗೂ ಮೂವರು ಸ್ನೇಹಿತರು ತುಘಲಕಾಬಾದ್ ಬೆಟ್ಟವೇರಿದ್ದರು ಎನ್ನಲಾಗಿದೆ. ಬೆಟ್ಟದ ಮೇಲಿಂದ ತುಘಲಕಾಬಾದ್ ಕಾಡು ಹಾಗೂ ಮಂಕಿ ಪಾರ್ಕ್ ವೀಕ್ಷಣೆ ಮಾಡುತ್ತಿದ್ದರಂತೆ. ಈ ವೇಳೆ ಕಾಡಿಗೆ ಒಂದು ಜೋಡಿ ಹೋಗಿದ್ದನ್ನು ನೋಡಿದ್ದಾರೆ. ಇವರು ಕಾಡಿನೊಳಗೆ ಹೋಗಿದ್ದಾರೆ. ಹುಡುಗಿಯ ಬಳಿಯಿದ್ದ ಬಂಗಾರವನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ಯುವಕ ವಿರೋಧ ವ್ಯಕ್ತಪಡಿಸಿದ್ದರಿಂದ ಚಾಕು ಇರಿದು ಕೊಲೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...