alex Certify
ಕನ್ನಡ ದುನಿಯಾ       Mobile App
       

Kannada Duniya

ಉಸಿರು ನಿಲ್ಲುವವರೆಗೂ ಕತ್ತು ಹಿಸುಕುತ್ತಿದ್ದ ವಕೀಲ ಪತಿ

ಚಂಡೀಗಢದಲ್ಲಿ ಶ್ರೀಮಂತ ಕುಟುಂಬವೊಂದು ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದೆ. ಪತ್ನಿಗೆ ಗಂಡು ಮಗುವಾಗಲಿಲ್ಲ ಎನ್ನುವ ಕಾರಣಕ್ಕೆ ವಕೀಲನೊಬ್ಬ ಪತ್ನಿ ಹತ್ಯೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ, ಆತನ ತಂದೆ-ತಾಯಿಯನ್ನು ಬಂಧಿಸಲಾಗಿದೆ.

ಮೃತ ಶಬನಮ್ ಮದುವೆ 2005 ರಲ್ಲಿ ವಕೀಲ ಹರ್ದೀಪ್ ಸಿಂಗ್ ಜೊತೆ ನೆರವೇರಿತ್ತು. ಶಬನಮ್ ಗೆ ಒಂದು ಹೆಣ್ಣು ಮಗುವಿದೆ. ಶಬನಮ್ ಎರಡನೇ ಮಗು ಹೆರಲು ಸಾಧ್ಯವಿಲ್ಲವೆಂದು ವೈದ್ಯರು ಹೇಳಿದ್ದಾರೆ. ತಂದೆ-ತಾಯಿ ಆಸೆಯಂತೆ ಪತ್ನಿ ಗಂಡು ಮಗುವನ್ನು ನೀಡುವುದಿಲ್ಲ ಎನ್ನುವ ಕಾರಣಕ್ಕೆ ಹರ್ದೀಪ್ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

ಇನ್ನೊಂದು ಮದುವೆಯಾಗಲು ಮುಂದಾಗಿದ್ದ ಹರ್ದೀಪ್, ಶಬನಮ್ ಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದ. ಆದ್ರೆ ಶಬನಮ್ ವಿಚ್ಛೇದನ ನೀಡಲು ನಿರಾಕರಿಸಿದ್ದಳು. ಸೋಮವಾರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಗಳು ಮಾವನಿಗೆ ಕರೆ ಮಾಡಿ ಅಮ್ಮ ಮಾತನಾಡ್ತಿಲ್ಲ ಎಂದಿದ್ದಾಳೆ. ತಕ್ಷಣ ಮನೆಗೆ ಬಂದ ಸಹೋದರನಿಗೆ ಶಬನಮ್ ಶವ ಸಿಕ್ಕಿದೆ. ಕುತ್ತಿಗೆಯಲ್ಲಿ ಹಗ್ಗವಿರುವುದು ಕಂಡು ಬಂದಿದೆ. ಶಬನಮ್ ಉಸಿರು ನಿಲ್ಲಿಸುವವರೆಗೂ ಹರ್ದೀಪ್ ಪತ್ನಿ ಕತ್ತು ಹಿಸುಕುತ್ತಿದ್ದನಂತೆ. ಶನಬಮ್ ಸಹೋದರನ ದೂರಿನ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...