alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆಗೈದ ತಂದೆ..!

revenue-collection-vs-child-rape

ಎರಡು ವರ್ಷದ ಮುಗ್ದ ಬಾಲಕನ ಶವ ಪರೀಕ್ಷೆ ನಡೆಸಿದ ವೈದ್ಯರು ವರದಿ ನೋಡಿ ದಂಗಾಗಿದ್ದಾರೆ. ಆತನ ಮೇಲೆ ಲೈಂಗಿಕ ಹಲ್ಲೆಯಾಗಿದ್ದು, ಈ ಕ್ರೂರ ಕೆಲಸವನ್ನು ಮತ್ತ್ಯಾರೂ ಅಲ್ಲ ಬಾಲಕನ ತಂದೆಯೇ ಮಾಡಿದ್ದಾನೆ.

ಘಟನೆ ನಡೆದಿರುವುದು ಪಂಜಾಬ್ ನ ಡೇರಾ ಬಸ್ಸಿಯ ಹಳ್ಳಿಯೊಂದರಲ್ಲಿ. ತಂದೆಯೇ 2 ವರ್ಷದ ಮಗನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ತನ್ನ ಜೊತೆ ಮಲಗಿದ್ದ ಮಗನ ಜೊತೆ ಕೆಟ್ಟದಾಗಿ ನಡೆದುಕೊಂಡ ಪಾಪಿ ನಂತ್ರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಮಗುವನ್ನು ರಕ್ಷಿಸುವ ನಾಟಕವಾಡ್ತಾ ಆಸ್ಪತ್ರೆ ಸುತ್ತಿದ್ದಾನೆ.

ಬಾಲಕನ ಮರಣೋತ್ತರ ಪರೀಕ್ಷೆ ವರದಿ ಬಂದ ನಂತ್ರ ಪೊಲೀಸರು ಕ್ರೂರಿ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆದಿದ್ದು, ಕರುಳು ಕಟ್ ಆಗಿ ಅತಿಯಾದ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೆ ಮಗುವಿನ ಕತ್ತಿನ ಮೇಲೆ ತಂದೆ ಕೈ ಗುರುತಿದೆ. ನಾಲ್ಕು ಹೆಣ್ಣು ಮಕ್ಕಳ ನಂತ್ರ ಗಂಡು ಮಗು ಜನಿಸಿತ್ತು ಎನ್ನಲಾಗಿದೆ. ಮೊದಲು ಕಟ್ಟು ಕಥೆ ಹೇಳಿದ್ದ ತಂದೆ ಪೊಲೀಸ್ ಒದೆ ಬಿದ್ದ ಮೇಲೆ ಸತ್ಯ ಒಪ್ಪಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...