alex Certify
ಕನ್ನಡ ದುನಿಯಾ       Mobile App
       

Kannada Duniya

ತಂಗಿಯೊಂದಿಗೆ ಸರಸದ ಅಪವಾದಕ್ಕೆ ದುಡುಕಿದ ಯುವಕ

deli-tayi-son

ನವದೆಹಲಿ: ತಾಯಿ ಹಾಗೂ ಸಹೋದರಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ನೆರೆ ಹೊರೆಯವರು ಆರೋಪಿಸಿದ್ದರಿಂದ ಯುವಕನೊಬ್ಬ ದುಡುಕಿದ್ದಾನೆ.

35 ವರ್ಷದ ಯುವಕ ತಾಯಿ, ಸಹೋದರಿಯೊಂದಿಗೆ ವಾಸವಾಗಿದ್ದು, ಆತ ಇಬ್ಬರೊಂದಿಗೂ ಸರಸವಾಡಿದ್ದಾನೆ ಎಂದು ಅಕ್ಕಪಕ್ಕದವರು ದೂರಿದ್ದಾರೆ. ಇದರಿಂದ ಮನನೊಂದ ಯುವಕ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಅಂದಹಾಗೇ ಈ ಯುವಕ ಮಾನಸಿಕವಾಗಿ ಜರ್ಜರಿತನಾಗಿದ್ದ.

ತೀವ್ರವಾದ ಮಾನಸಿಕ ಅಸ್ವಸ್ಥತೆ(ಸ್ಕಿಜೋಫ್ರೇನಿಯಾ)ಯಿಂದ ಯುವಕ ಬಳಲುತ್ತಿದ್ದ. ಇಂತಹವರು ಭ್ರಮೆಯಲ್ಲಿರುತ್ತಾರೆ. ಅದೇ ರೀತಿ ಕಾಮಪ್ರಚೋದಕ ವಿಡಿಯೋ ನೋಡಿ ಭ್ರಮೆಯಲ್ಲಿದ್ದ ಯುವಕ ನೆರೆಹೊರೆಯವರು ಅಪವಾದ ಹೊರಿಸಿದ್ದರಿಂದ ದುಡುಕಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ತಾನೇನೋ ತಪ್ಪು ಮಾಡಿದ್ದೇನೆ ಎಂದು ಭಾವಿಸಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ. ಇದೇ ಮೊದಲ ಪ್ರಕರಣವೇನಲ್ಲ. ಇಂತಹ ಹಲವಾರು ಘಟನೆಗಳು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...