alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ರಾಭಂಗವಾಗಿದ್ದಕ್ಕೆ ನಡೆಯಿತು ಭೀಕರ ಹತ್ಯೆ

s-c-vanchaneಮನೆಯಲ್ಲಿ ಮಧ್ಯಾಹ್ನ ನಿದ್ರೆ ಮಾಡುತ್ತಿದ್ದವನೊಬ್ಬ ತನ್ನ ಹಿರಿಯ ಸಹೋದರ ಜೋರಾಗಿ ಹಾಡು ಹೇಳುವ ಮೂಲಕ ನಿದ್ರಾಭಂಗ ಮಾಡಿದನೆಂಬ ಕ್ಷುಲ್ಲಕ ಕಾರಣಕ್ಕೆ ಆತನನ್ನು ಹೊರಕ್ಕೆಳೆದುಕೊಂಡು ಬಂದು ಲೈಟ್ ಕಂಬಕ್ಕೆ ಕಟ್ಟಿ ಸಾರ್ವಜನಿಕರ ಸಮ್ಮುಖದಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್ಘಡದ ಬಲೊಡ್ ಜಿಲ್ಲೆಯಲ್ಲಿ ನಡೆದಿದೆ.

ದೌಂಡಿಲೊಹ್ರಾ ಗ್ರಾಮದ ಸುರೇಶ್ ಎಂಬಾತ ತನ್ನ ಹಿರಿಯ ಸಹೋದರ 45 ವರ್ಷದ ಚಿಂತುರಾಮ್ ನ ತಲೆಯನ್ನು ಗ್ರಾಮಸ್ಥರ ಸಮ್ಮುಖದಲ್ಲೇ ಕೊಡಲಿಯಿಂದ ಕತ್ತರಿಸಿ ಹತ್ಯೆ ಮಾಡಿದ್ದು, ಬಳಿಕ ರಕ್ತಸಿಕ್ತ ಆಯುಧದ ಸಮೇತ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಸಹೋದರರ ಮಧ್ಯೆ ಈ ಹಿಂದಿನಿಂದಲೂ ಕಲಹ ನಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಸುರೇಶ್ ಮನೆಯಲ್ಲಿ ನಿದ್ರಿಸುತ್ತಿದ್ದನೆನ್ನಲಾಗಿದೆ. ಆಗ ಚಿಂತುರಾಮ್ ಬೇಕೆಂದೇ ದೊಡ್ಡ ದ್ವನಿಯಲ್ಲಿ ಹಾಡು ಹೇಳಲಾರಂಭಿಸಿದ್ದು, ಇದು ಸುರೇಶನ ನಿದ್ರೆಗೆ ಭಂಗ ತಂದಿದೆ. ಆತ ಸಹೋದರನ ಜೊತೆ ಕಾದಾಟಕ್ಕೆ ನಿಂತಿದ್ದು, ಚಿಂತುರಾಮ್ ನನ್ನು ಮನೆಯಿಂದ ಹೊರಕ್ಕೆಳೆದುಕೊಂಡು ಬಂದು ಲೈಟ್ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ಬಳಿಕ ಕೊಡಲಿಯಿಂದ ತಲೆ ಕತ್ತರಿಸಿ ಹತ್ಯೆ ಮಾಡಿದ್ದಾನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...