alex Certify
ಕನ್ನಡ ದುನಿಯಾ       Mobile App
       

Kannada Duniya

3 ಮಕ್ಕಳ ಮುಂದೆ ಪತ್ನಿ ಕತ್ತು ಹಿಸುಕಿದ

ದೆಹಲಿಯಲ್ಲಿ ಪತಿಯೊಬ್ಬ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೂರು ಮಕ್ಕಳ ಮುಂದೆಯೇ ಪತ್ನಿ ಹತ್ಯೆಗೈದ ಪತಿ ನಂತ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದ್ರೆ ಇದ್ರಲ್ಲಿ ಯಶ ಸಿಗದ ಕಾರಣ ಪೊಲೀಸರ ಮುಂದೆ ಶರಣಾಗಿದ್ದಾನೆ.

ಆರೋಪಿ ಹೀರಾಲಾಲ್ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತರಿಕೆ ನಂತ್ರ ಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೀರಾಲಾಲ್ ಮದುವೆ 8 ವರ್ಷಗಳ ಹಿಂದಾಗಿತ್ತು. ಡಾಲಿ ಹಾಗೂ ಹೀರಾಲಾಲ್ ಗೆ ಮೂವರು ಮಕ್ಕಳು. ಕೆಲ ದಿನಗಳ ಹಿಂದೆ ಹೀರಾಲಾಲ್ ಗೆ ಪತ್ನಿ ಮೇಲೆ ಸಂಶಯ ಶುರುವಾಗಿತ್ತು. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಹೀರಾಲಾಲ್ ಶಂಕಿಸುತ್ತಿದ್ದ.

ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪ್ರಕರಣ ವಿಚ್ಛೇದನದವರೆಗೆ ಹೋಗಿತ್ತು. ಕೋರ್ಟ್ 4 ತಿಂಗಳ ಕಾಲಾವಕಾಶ ನೀಡಿತ್ತು. ಆದ್ರೆ ನಾಲ್ಕು ತಿಂಗಳೊಳಗೆ ಹೀರಾಲಾಲ್ ಪತ್ನಿ ಹತ್ಯೆ ಮಾಡಿದ್ದಾನೆ. ನಂತ್ರ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದು ಫಲಕೊಡದ ಕಾರಣ ನರ ಕತ್ತರಿಸಿಕೊಂಡಿದ್ದಾನೆ. ಇದನ್ನು ನೋಡಿ ಮಕ್ಕಳು ಅಳಲು ಶುರುಮಾಡಿವೆ. ತಕ್ಷಣ ಹೀರಾಲಾಲ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅಪ್ಪ-ಅಮ್ಮನ ಜಗಳದಲ್ಲಿ ಈಗ ಮೂರು ಮಕ್ಕಳು ಅನಾಥವಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...