alex Certify
ಕನ್ನಡ ದುನಿಯಾ       Mobile App
       

Kannada Duniya

ವಂಚನೆಗಾಗಿ ಪತ್ನಿ ಸಹಿಯನ್ನೇ ನಕಲು ಮಾಡಿದ ಪತಿ

ಪತ್ನಿಯ ಸಹಿಯನ್ನು ನಕಲು ಮಾಡಿ ಬ್ಯಾಂಕ್ ನಲ್ಲಿ ಖಾತೆ ತೆರೆದು ಪತಿಯೊಬ್ಬ ವಂಚನೆ ನಡೆಸಿರುವ ಪ್ರಕರಣ ಗುಜರಾತ್ ನಲ್ಲಿ ನಡೆದಿದೆ. ಈ ಸಂಬಂಧ 32 ವರ್ಷದ ಮನ್ಪ್ರೀತ್ ಕೌರ್ ಎಂಬ ಮಹಿಳೆ ತನ್ನ ಪತಿ ಮನ್ದೀಪ್ ಸಿಂಗ್ ಮಕೀಜಾ ಎಂಬುವನ ವಿರುದ್ಧ ಗುಜರಾತ್ ಯೂನಿವರ್ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನ್ಪ್ರೀತ್ ಕೌರ್ ಮತ್ತು ಮನ್ದೀಪ್ ಸಿಂಗ್ 2013 ರಲ್ಲಿ ವಿವಾಹವಾಗಿದ್ದರು. ಮೊದಲು ದೆಹಲಿಯಲ್ಲಿ ನೆಲೆಸಿದ್ದ ದಂಪತಿ ಆನಂತರದಲ್ಲಿ ಅಹ್ಮದಾಬಾದ್ ಗೆ ಶಿಫ್ಟ್ ಆಗಿದ್ದಾರೆ. ಮನ್ಪ್ರೀತ್ ತಂದೆ ತನ್ನ ಅಳಿಯನಿಗೆ ಚಾರ್ಟೆಡ್ ಅಕೌಂಟೆಂಟ್ ಕಂಪನಿಯಲ್ಲಿ ಕೆಲಸ ಕೊಡಿಸೋದಕ್ಕೂ ಸಹಾಯ ಮಾಡಿದ್ದರು. ಆ ನಂತರದಲ್ಲಿ ದಂಪತಿಯ ನಡುವೆ ಮನಸ್ತಾಪ ಉಂಟಾಯ್ತು. ಇದರಿಂದಾಗಿ ಮನ್ಪ್ರೀತ್, ಗಂಡ ಮತ್ತು ಆತನ ಮನೆಯವರ ವಿರುದ್ಧ 2016 ರಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಸಮಯದಲ್ಲಿ ಮನ್ದೀಪ್ ಕೆಲ ಕಾಲ ತಲೆಮರೆಸಿಕೊಂಡಿದ್ದ.

ಆನಂತರ ತಿಳಿದು ಬಂದ ವಿಚಾರ ಏನಂದ್ರೆ ಮನ್ದೀಪ್ ಮಾಲೀಕರು ಆತನ ಬಾಕಿ ವೇತನ ಅಂತ 3 ಲಕ್ಷ 20 ಸಾವಿರ ರೂಪಾಯಿ ಚೆಕ್ ಒಂದನ್ನ ನೀಡಿದ್ದರು. ಈ ಚೆಕ್ ಬ್ಯಾಂಕ್ ಗೆ ಹಾಕಲು ಮನ್ದೀಪ್ ಹೆಂಡತಿಯ ದಾಖಲೆಗಳನ್ನ ಬಳಸಿದ್ದ. ಮನ್ದೀಪ್ ಕೌರ್ ಳ ವೋಟರ್ ಐಡಿಯನ್ನ ಬಳಸಿ ಮನ್ದೀಪ್ ಹೆಸರಿನಲ್ಲಿ ಅಕೌಂಟ್ ಓಪನ್ ಮಾಡಿದ್ದ. ಅದರಲ್ಲಿ ಪತ್ನಿಯ ಸಹಿಯನ್ನೇ ನಕಲು ಮಾಡಿದ್ದ. ಈ ಸಂಬಂಧ ಮನ್ಪ್ರೀತ್ ಕೌರ್ ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 466 ಮತ್ತು 471ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...