alex Certify
ಕನ್ನಡ ದುನಿಯಾ       Mobile App
       

Kannada Duniya

ಕುಟುಂಬದ ಐವರನ್ನು ಕೊಂದು ತಾನೂ ಸಾವಿಗೆ ಶರಣಾದ ಯುವಕ

suicide

ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಹತ್ಯೆ ಮಾಡಿದ್ದಾನೆ. ನಂತರ ತಾನು ಕೂಡ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 32 ವರ್ಷದ ಸಲೀಂ ಎಂಬಾತ ತನ್ನ ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಮೊದಲು ನೀರಿಗೆ ತಳ್ಳಿದ್ದ. ನಂತರ ತಾನೂ ನೀರಿಗೆ ಹಾರಿದ್ದಾನೆ.

ಪಾಲೇರ್ ಜಲಾಶಯದಲ್ಲಿ ಸಲೀಂ ಈ ಕೃತ್ಯ ಎಸಗಿದ್ದಾನೆ. ಮೊದಲು ಇದು ಸಾಮೂಹಿಕ ಆತ್ಮಹತ್ಯೆ ಅಂತಾನೇ ಪೊಲೀಸರು ನಂಬಿದ್ದರು. ಆದ್ರೆ ಕೌಟುಂಬಿಕ ಸಮಸ್ಯೆಯಿಂದಾಗಿ ಐವರನ್ನು ಕೊಂದು ಸಲೀಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಸಲೀಂ ತಂದೆ ಮದ್ಯ ವ್ಯಸನಿಯಾಗಿದ್ದ. ಕುಡಿದು ಮನೆಯವರನ್ನೆಲ್ಲ ಹಿಂಸಿಸುತ್ತಿದ್ದ. ಇದರಿಂದ ಬೇಸತ್ತ ಸಲೀಂ ಮನೆಯವರನ್ನೆಲ್ಲ ನೀರಿಗೆ ತಳ್ಳಿ, ಸಾವಿಗೆ ಶರಣಾಗಿದ್ದಾನೆ. ಸಲೀಂ ಬರೆದಿಟ್ಟಿದ್ದಾನೆ ಎನ್ನಲಾದ ಸುಸೈಡ್ ನೋಟ್ ಕೂಡ ಮನೆಯಲ್ಲಿ ಪತ್ತೆಯಾಗಿದೆ. ಮೃತ ಶೇಕ್ ಪಿಂಟೂ ಸಾಹಿಬ್, ಮೆಹಬೂಬ್ ಬಿ, ರಜಿಯಾ, ಶಹನಾಜ್ ಬೇಗಂ ಹಾಗೂ ನಸ್ರೀನಾ ಮೃತದೇಹವನ್ನು ಜಲಾಶಯದಿಂದ ಹೊರತೆಗೆಯಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...