alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ನಡುರಸ್ತೆಯಲ್ಲಿ ನಡೀತು ಭೀಕರ ಕೃತ್ಯ

man-killed-759

ಗುರ್ಗಾಂವ್ ನಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. JK 24×7 ಅನ್ನೋ ಸುದ್ದಿ ವಾಹಿನಿಯ ಕೋ ಆರ್ಡಿನೇಟರ್ ಆಗಿದ್ದ ಸುರೇಂದರ್ ರಾಣಾ ಎಂಬಾತನ ಮೇಲೆ 5 ಬಾರಿ ಗುಂಡು ಹಾರಿಸಲಾಗಿದೆ. ಆದ್ರೆ ಸುರೇಂದರ್ ನಿಜವಾದ ಪತ್ರಕರ್ತನಾಗಿರಲಿಲ್ಲ, ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಅಂತಾ ಪೊಲೀಸರು ಶಂಕಿಸಿದ್ದಾರೆ.

ಸಫಾರಿ ಕಾರಿನಲ್ಲಿ ಸುರೇಂದರ್ ತೆರಳುತ್ತಿದ್ದ. ಕಾರು ನಿಲ್ಲಿಸಿ ಆತ ಕೆಳಕ್ಕಿಳಿಯುತ್ತಿದ್ದಂತೆ ಎದುರಿನಿಂದ ಸ್ಯಾಂಟ್ರೋ ಕಾರಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ಮಳೆಗರೆದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕೊಲೆಯಾದ ಸಮಯದಲ್ಲಿ ಸುರೇಂದರ್ ಮಾದಕ ವಸ್ತು ಸೇವಿಸಿದ್ದ ಅಂತಾ ಪೊಲೀಸರು ತಿಳಿಸಿದ್ದಾರೆ.

ಮೃತನ ಪತ್ನಿ ಪ್ರಕರಣ ದಾಖಲಿಸಿದ್ದು, ನಾಲ್ವರು ಆರೋಪಿಗಳ ಹೆಸರನ್ನು ಕೂಡ ಉಲ್ಲೇಖಿಸಿದ್ದಾಳೆ. ಈ ಕೊಲೆಯಲ್ಲಿ ಒಬ್ಬ ಮಹಿಳೆ ಕೂಡ ಭಾಗಿಯಾಗಿದ್ದಾಳೆಂದು ದೂರಿದ್ದಾಳೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯ ಇದು ಅಂತಾ ಪೊಲೀಸರು ಶಂಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...