alex Certify
ಕನ್ನಡ ದುನಿಯಾ       Mobile App
       

Kannada Duniya

ಹಂತಕನ ಪತ್ತೆಗೆ ನೆರವಾಗಿತ್ತು ಆ ಸಣ್ಣ ಕ್ಲೂ….

ಕೌಟುಂಬಿಕ ಕಲಹವೊಂದರಲ್ಲಿ ಪತ್ನಿಯನ್ನ ಕೊಂದು ಆಕೆಯ ಮೃತದೇಹವನ್ನ ಏಳು ತುಂಡುಗಳಾಗಿ ಕತ್ತರಿಸಿ ಬಿಸಾಡಿದ ಅಮಾನುಷ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಜೀದ್ ಅಲಿ ಅನ್ಸಾರಿ ಮತ್ತು ಆತನ ಇಬ್ಬರು ಸೋದರರನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಯ ಮಧ್ಯೆ ಹಣಕಾಸಿನ ವಿಚಾರ ಮತ್ತು ಪರಪುರುಷನೊಂದಿಗೆ ಅನೈತಿಕ ಸಂಬಂಧದ ಬಗ್ಗೆ ಪದೇ ಪದೇ ಜಗಳ ನಡೆಯುತ್ತಿತ್ತು.

ಈ ಗಲಾಟೆಯೇ ತಾರಕಕ್ಕೇರಿ ಸಜೀದ್ ಅಲಿ ಅನ್ಸಾರಿ ಪತ್ನಿ ಜೂಹಿಯನ್ನ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಜೂಹಿ ಮೃತದೇಹವನ್ನ ಏಳು ತುಂಡುಗಳಾಗಿ ಕತ್ತರಿಸಿ ಅದನ್ನ ದೊಡ್ಡ ರಟ್ಟಿನ ಪೆಟ್ಟಿಗೆ, ಅಕ್ಕಿ ಮೂಟೆಯಲ್ಲಿಟ್ಟು ಬಿಸಾಡಿದ್ದಾರೆ. ಆನಂತರ ಮನೆಗೆ ಬಂದು ಎಂದಿನ ಹಾಗೆ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆದ್ರೆ ಎಲ್ಲವು ಅವರಂದುಕೊಂಡ ಹಾಗೆ ಆಗಲಿಲ್ಲ.

ಅವರು ಬಿಸಾಡಿದ ರಟ್ಟಿನ ಪೆಟ್ಟಿಗೆಯೊಂದು ಸಾರ್ವಜನಿಕರ ಕಣ್ಣಿಗೆ ಬಿದ್ದು ವಿಚಾರ ಪೊಲೀಸರಿಗೆ ತಿಳಿದಿದೆ. ರಟ್ಟಿನ ಪೆಟ್ಟಿಗೆಯಲ್ಲಿ ಜೂಹಿ ಶವದ ಮೇಲಿದ್ದ ಬಟ್ಟೆಗಳನ್ನ ಬಳಸಿಯೇ ಪೊಲಿಸರು ಈ ಪ್ರಕರಣವನ್ನ ಬಯಲಿಗೆಳೆದಿದ್ದಾರೆ. ರಟ್ಟಿನ ಪೆಟ್ಟಿಗೆಯ ಮೇಲಿದ್ದ ಪಿನ್ಕೋಡ್ ಹಂತಕರ ಪತ್ತೆಗೆ ನೆರವಾಗಿದೆ. ರಟ್ಟಿನ ಪೆಟ್ಟಿಗೆ ಯಾರಿಂದ ಯಾರಿಗೆ ಸರಬರಾಜಾಗಿತ್ತು ಅನ್ನೋದನ್ನ ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...