alex Certify
ಕನ್ನಡ ದುನಿಯಾ       Mobile App
       

Kannada Duniya

OMG! ವರ್ಣಮಾಲೆ ಹೇಳದ ಕಂದಮ್ಮನಿಗೆ ಇದೆಂತ ಶಿಕ್ಷೆ

female-child-with-hand-over-her-mouth1 ನೇ ತರಗತಿಯಲ್ಲಿ ಓದುತ್ತಿದ್ದ ತನ್ನ 6 ವರ್ಷದ ಮಗಳಿಗೆ ಹೋಂ ವರ್ಕ್ ಮಾಡಿಸುವ ವೇಳೆ ಆಕೆ ವರ್ಣಮಾಲೆಯನ್ನು ಹೇಳಲಿಲ್ಲವೆಂಬ ಕಾರಣಕ್ಕೆ ಪಾಪಿ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡುವ ಮೂಲಕ ಆಕೆಯ ಸಾವಿಗೆ ಕಾರಣನಾಗಿದ್ದಾನೆ.

ಮಹಾರಾಷ್ಟ್ರದ ಔರಾಂಗಾಬಾದ್ ಜಿಲ್ಲೆಯ ಚಿಕ್ಲಾತಾನ ಎಂಬಲ್ಲಿ ಈ ಘಟನೆ ನಡೆದಿದ್ದು, ಶನಿವಾರ ರಾತ್ರಿ ಸಂಜಯ್ ಕುತೆ ಎಂಬಾತ ತನ್ನ 6 ವರ್ಷದ ಮಗಳು ಭಾರತಿಗೆ ಪಾಠ ಹೇಳಿಕೊಡಲು ಮುಂದಾಗಿದ್ದಾನೆ. ಆಕೆಗೆ ವರ್ಣಮಾಲೆ ಹೇಳುವಂತೆ ಆತ ಹೇಳಿದ್ದು, ಪುಟ್ಟ ಕಂದಮ್ಮ ಹೆದರಿಕೆಯಿಂದಾಗಿ ಸರಿಯಾಗಿ ಹೇಳಿಲ್ಲ.

ಅಷ್ಟಕ್ಕೆ ಆಕ್ರೋಶಗೊಂಡ ಆತ ಶಿಕ್ಷೆಯಾಗಿ ಈರುಳ್ಳಿ ತಿನ್ನುವಂತೆ ಹೇಳಿದ್ದಾನೆ. ಅಪ್ಪ ಹೇಳಿದ್ದನ್ನು ಪಾಲಿಸಲು ಮುಂದಾದ ಮಗಳು ಈರುಳ್ಳಿ ತಿನ್ನುವ ವೇಳೆ ಘಾಟು ತಡೆಯಲಾರದೆ ನುಂಗಿ ಬಿಟ್ಟಿದ್ದಾಳೆ. ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಉಸಿರು ಕಟ್ಟಿ ಭಾರತಿ ಸಾವನ್ನಪ್ಪಿದ್ದಾಳೆ.

ಇದೆಲ್ಲವೂ ಸಂಜಯ್ ನ ಪತ್ನಿ ಹಾಗೂ ಮಗನ ಮುಂದೆ ನಡೆದಿದ್ದು, ತಾನು ಮಾಡಿದ ಘೋರ ಕೃತ್ಯವನ್ನು ಮುಚ್ಚಿ ಹಾಕಲು ಮುಂದಾದ ಸಂಜಯ್ ತರಾತುರಿಯಲ್ಲಿ ಮಗಳ ಶವವನ್ನು ಮಣ್ಣು ಮಾಡಿದ್ದಾನೆ. ಆದರೆ ತಾಯಿ ಹೃದಯಕ್ಕೆ ಮಗಳ ಸಾವಿನ ನೋವು ತಡೆಯಲಾಗಿಲ್ಲ. ಬಂಧುಗಳ ಮುಂದೆ ನಡೆದ ವಿಷಯವನ್ನೆಲ್ಲಾ ಆಕೆ ಹೇಳಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಸಂಜಯ್ ನನ್ನು ಬಂಧಿಸಿರುವ ಪೊಲೀಸರು ಭಾರತಿಯ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...