alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಟ ಕೊಟ್ಟ ಮಂಗಕ್ಕೆ ಹಿಗ್ಗಾಮುಗ್ಗಾ ಥಳಿತ

ಮುಂಬೈ: ಮಂಗ ಕಾಟ ಕೊಟ್ಟ ಕಾರಣಕ್ಕೆ ಅದನ್ನು ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಥಳಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ವಸೀಂ ಜಿಲ್ಲೆಯ ಕುರುಹದಲ್ಲಿ ನಡೆದಿದೆ.

ಕಟುಕನೊಬ್ಬ ಮಂಗವನ್ನು ಹಗ್ಗದಿಂದ ಮರಕ್ಕೆ ನೇತು ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ಅದನ್ನು ಕೆಳಗೆ ಇಳಿಸಿ ಬಡಿಗೆಯಿಂದ ಬಾರಿಸಿದ್ದು, ನೋವಿನಿಂದ ಮಂಗ ಒದ್ದಾಡಿದರೂ, ಕರುಣೆ ತೋರದ ಕ್ರೂರಿ ಅದರ ಮೇಲೆ ಸಿಟ್ಟು ತೀರಿಸಿಕೊಂಡಿದ್ದಾನೆ.

ಇದನ್ನು ಅಲ್ಲಿದ್ದವರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ವೈರಲ್ ಆಗಿದೆ. ಮಂಗನನ್ನು ಥಳಿಸಿದ ವ್ಯಕ್ತಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಫೇಸ್ ಬುಕ್ ನಲ್ಲಿ ಕ್ಯಾಂಪೇನ್ ನಡೆಸಲಾಗಿದೆ. ಪ್ರಾಣಿಪ್ರಿಯರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 16 ರಂದು ಘಟನೆ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮಂಗವನ್ನು ಥಳಿಸಿದ ಪವನ್ ಬಂಗಾರ್(23) ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...