alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ 4 ದಿನವಿರುವಾಗ ಖಾಸಗಿ ಅಂಗ ಕತ್ತರಿಸಿದ್ರು…!

ಮಧ್ಯಪ್ರದೇಶದ ಮುರ್ರೆನಾದಲ್ಲಿ ಭೀಕರ ಘಟನೆ ನಡೆದಿದೆ. ಮದುವೆಗೆ ಸಿದ್ಧವಾಗ್ತಿದ್ದ ಯುವಕನೊಬ್ಬನ ಖಾಸಗಿ ಅಂಗವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಘಟನೆ ಗುರುವಾರ ನಡೆದಿದೆ.

ಫೆಬ್ರವರಿ 6ರಂದು 22 ವರ್ಷದ ಯುವಕನ ಮದುವೆ ನಿಶ್ಚಯವಾಗಿತ್ತು. ಫೆಬ್ರವರಿ 2ರಂದು ಮದುವೆ ಕಾರ್ಯಕ್ರಮ ಆರಂಭವಾಗುವುದಿತ್ತು. ಫೆಬ್ರವರಿ 1ರಂದು ಯುವಕ ಕ್ವಾರಿ ನದಿ ಬಳಿ ಶೌಚಕ್ಕೆ ಹೋಗಿದ್ದಾನೆ. ನಂತ್ರ ನದಿ ನೀರಿನಲ್ಲಿ ಮುಖ ತೊಳೆಯಲು ಮುಂದಾಗಿದ್ದಾನೆ. ಈ ವೇಳೆ ಯುವಕನ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಖಾಸಗಿ ಅಂಗ ಕತ್ತರಿಸಿದ್ದಾರೆ. ಕತ್ತರಿಸಲ್ಪಟ್ಟ ಅಂಗವನ್ನು ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದಾರೆ.

ಯುವಕನನ್ನು ಗ್ವಾಲಿಯರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಪ್ರಜ್ಞೆ ತಪ್ಪಿದ್ದರಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಾಗ್ತಿಲ್ಲ. ಕುಟುಂಬಸ್ಥರು ಕೂಡ ಕಾರಣವೇನು ಎಂಬುದನ್ನು ತಿಳಿದಿಲ್ಲ. ಕತ್ತರಿಸಲ್ಪಟ್ಟ ಅಂಗ ಸಿಕ್ಕಿದ್ದರೆ ಮರು ಜೋಡಣೆ ಮಾಡಬಹುದಿತ್ತು. ಆದ್ರೆ ಅಂಗವಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಕಠಿಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...