alex Certify
ಕನ್ನಡ ದುನಿಯಾ       Mobile App
       

Kannada Duniya

ಈತ ಕುಖ್ಯಾತ ಕಳ್ಳನಾಗಲು ಇದಂತೆ ಕಾರಣ..!

thief 33457

ಗುಜರಾತಿನ ಸೂರತ್ ಪೊಲೀಸರು 27 ವರ್ಷದ ರಿಕ್ಷಾ ಕಳ್ಳನನ್ನು ಬಂಧಿಸಿದ ವೇಳೆ ಆತ ನೀಡಿದ ಹೇಳಿಕೆಯಿಂದ ಅಚ್ಚರಿಗೊಳಗಾಗಿದ್ದಾರೆ. ತನ್ನ 13 ನೇ ವಯಸ್ಸಿನಿಂದಲೇ ಕಳ್ಳತನ ಆರಂಭಿಸಿರುವ ಈತ, ಈಗಾಗಲೇ 6 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದು, ಸೂರತ್ ಪೊಲೀಸರು ಮತ್ತೊಮ್ಮೆ ಜೈಲಿಗೆ ಕಳುಹಿಸಲು ಮುಂದಾದ ವೇಳೆ ಖುಷಿಯಾಗಿ ಅದಕ್ಕೆ ಸಜ್ಜಾಗಿದ್ದಾನೆ.

ಮೆಹಬೂಬ್ ಖಾನ್ ಪಠಾಣ್ ಎಂಬ ಈತ, ಏಳನೇ ತರಗತಿಯಲ್ಲಿದ್ದ ವೇಳೆ ಹುಡುಗಿಯೊಬ್ಬಳನ್ನು ಪ್ರೀತಿಸಿದ್ದನಂತೆ. ಆದರೆ ಆಕೆ ಇವನಿಗೆ ಕೈ ಕೊಟ್ಟಿದ್ದಲ್ಲದೇ ನಂತರ ಬೇರೆಯವನ ಜೊತೆ ವಿವಾಹವನ್ನೂ ಆದಳಂತೆ. ಇದರಿಂದ ಮನನೊಂದ ಮೆಹಬೂಬ್ ಖಾನ್ ಆ ಆಘಾತದಿಂದ ಹೊರ ಬರಲು ಕಳ್ಳತನ ಮಾಡಲಾರಂಭಿಸಿದ್ದು, ಇದುವರೆಗೂ ಅದರಿಂದ ಹೊರ ಬರಲಾಗಿಲ್ಲವಂತೆ.

ಮೊದಲ ಬಾರಿಗೆ ತನ್ನ ಮನೆಯಲ್ಲಿ 250 ರೂ. ಕದ್ದು ಸಿಕ್ಕಿ ಬಿದ್ದ ಮೆಹಬೂಬ್ ಖಾನ್ ಗೆ ಮನೆಯವರು ತೀವ್ರವಾಗಿ ಥಳಿಸಿ ಬುದ್ದಿ ಹೇಳಿದ್ದಾರೆ. ಆದರೂ ಆತ ತನ್ನ ವರ್ತನೆ ತಿದ್ದಿಕೊಳ್ಳದ ಕಾರಣ ಸರಪಳಿಯಿಂದ ಕಟ್ಟಿ ಹಾಕಿದ್ದರಂತೆ. ಅದೇಗೋ ತಪ್ಪಿಸಿಕೊಂಡು ಮುಂಬೈ ಸೇರಿಕೊಂಡ ಮೆಹಬೂಬ್ ಖಾನ್, ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಕಳವು ಮಾಡಿ ಸಿಕ್ಕಿ ಬಿದ್ದು ಮುಂಬೈನ ಬಹುತೇಕ ಜೈಲುಗಳಲ್ಲಿ ಕಾಲ ಕಳೆದಿದ್ದಾನೆ. ಬಳಿಕ ಆಟೋರಿಕ್ಷಾ ಕಳ್ಳನಾಗಿ ಬದಲಾದ ಈತ ಸೂರತ್ ಪೊಲೀಸರ ಕೈಗೆ ಸಿಕ್ಕಿ ಬಿದ್ದು ಮತ್ತೊಮ್ಮೆ ಜೈಲು ಪಾಲಾಗುವ ಹಾದಿಯಲ್ಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...