alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನನ್ನು ಬಡಿದು ಕೊಂದ ಸಹೋದರ

ದೆಹಲಿಯ ಜಿತೇಂದ್ರ ಕುಮಾರ್ ಮತ್ತವನ ಪತ್ನಿ ತಮ್ಮ ನೆರೆಮನೆಯಲ್ಲಿದ್ದ 8 ವರ್ಷದ ಬಾಲಕಿಯನ್ನು ಸಮಾರಂಭವೊಂದಕ್ಕೆ ಜೊತೆಯಲ್ಲಿ ಕರೆದೊಯ್ದಿದ್ದರು. ಆದ್ರೆ ಜಿತೇಂದ್ರ ಕುಮಾರ್ ಆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ವಿಷಯ ಗೊತ್ತಾಗ್ತಿದ್ದಂತೆ ಬಾಲಕಿಯ ಸಂಬಂಧಿಕರು ರೊಚ್ಚಿಗೆದ್ದಿದ್ರು.

ಬಾಲಕಿಯ ಸಹೋದರ ಮತ್ತವನ ಸ್ನೇಹಿತರು ಆರೋಪಿ ಕುಮಾರ್ ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಹಲ್ಲೆಯಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, 4 ಗಂಟೆಗಳ ಬಳಿಕ ಜಿತೇಂದ್ರ ಕುಮಾರ್ ಮೃತಪಟ್ಟಿದ್ದಾನೆ. ಮಧ್ಯರಾತ್ರಿ 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ.

ಕುಮಾರ್ ದಿನಗೂಲಿ ಕಾರ್ಮಿಕ, ಶುಕ್ರವಾರ ರಾತ್ರಿ ಜಾಗರಣೆಗೆ ಹೊರಟಿದ್ದ. ಯಾರಾದ್ರೂ ಬರ್ತೀರಾ ಅಂತಾ ಅಕ್ಕಪಕ್ಕದವರನ್ನು ಕೇಳಿದ್ದಾನೆ. ನೆರೆಮನೆಯವರು ತಮ್ಮ 8 ವರ್ಷದ ಮಗಳನ್ನು ಜಾಗರಣೆ ನೋಡಲು ಕಳಿಸಿಕೊಟ್ಟಿದ್ದಾರೆ. ತನ್ನ ಪತ್ನಿಯೂ ಜೊತೆಗೆ ಬರುತ್ತಿದ್ದಾಳೆ ಅಂತಾ ಕುಮಾರ್ ಹೇಳಿದ್ದನಂತೆ.

ಬಳಿಕ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎನ್ನಲಾಗ್ತಿದೆ. ಘಟನೆಯಿಂದ ಬೆದರಿದ ಬಾಲಕಿ, ತಾಯಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಆಕೆಯ 18 ವರ್ಷದ ಸಹೋದರ ಮತ್ತು ಆತನ ಗೆಳೆಯರು ಆರೋಪಿಯನ್ನು ಕಟ್ಟಿಹಾಕಿ ಥಳಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...