alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಜೊತೆಗಿರೋ ಫೋಟೋ ನೋಡಿದ ಭಾವಿ ಪತಿ…!?

ವಾರಣಾಸಿಯ ಸಿಗ್ರಾ ಪೊಲೀಸ್ ಠಾಣೆ ಬಳಿ ವ್ಯಕ್ತಿಯೊಬ್ಬನಿಗೆ ಮಾಜಿ ಪ್ರೇಯಸಿ ಹಾಗೂ ಆಕೆಯ ಭಾವಿ ಪತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೂರ್ತಿ ಘಟನೆ ಬ್ಯಾಂಕ್ ಹೊರಗಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾಜಿ ಪ್ರೇಯಸಿ ಸೇರಿ ಐವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಒದೆ ತಿಂದ ಯುವಕ ಬ್ಯಾಂಕ್ ನಲ್ಲಿ ಮ್ಯಾನೇಜರ್ ಆಗಿದ್ದಾನಂತೆ. ಮೂರುವರೆ ವರ್ಷಗಳ ಹಿಂದೆ ಹಲ್ಲೆ ಮಾಡಿದ ಯುವತಿ ಪರಿಚಯವಾಗಿತ್ತಂತೆ. ಎರಡು ವರ್ಷಗಳ ಕಾಲ ದೆಹಲಿಯಲ್ಲಿ ಇಬ್ಬರು ಲಿವ್ ಇನ್ ನಲ್ಲಿದ್ದರಂತೆ. ಆದ್ರೆ ಕೆಲ ದಿನಗಳ ಹಿಂದಷ್ಟೇ ಯುವಕನಿಗೆ ವಾರಣಾಸಿಗೆ ವರ್ಗವಾಗಿತ್ತಂತೆ.

ಪ್ರೇಯಸಿಗೆ ಇನ್ನೊಂದು ಮದುವೆಯಾಗ್ತಿದೆ ಎಂಬ ವಿಷ್ಯ ತಿಳಿದ ಪೀಡಿತ ಯುವಕ, ಹುಡುಗಿ ಸುದ್ದಿಗೆ ಹೋಗಿರಲಿಲ್ಲವಂತೆ. ಆದ್ರೆ ಯುವತಿ ಮೊಬೈಲ್ ನಲ್ಲಿದ್ದ ಫೋಟೋ ಆಕೆ ಮದುವೆಯಾಗುವವನ ಕಣ್ಣಿಗೆ ಬಿದ್ದಿದೆ. ಇದ್ರಿಂದ ಬಚಾವ್ ಆಗಲು ಹುಡುಗಿ ಸುಳ್ಳು ಹೇಳಿದ್ದಾಳೆ. ಆತ ತನಗೆ ಹಿಂಸೆ ನೀಡ್ತಾನೆಂದು ಸುಳ್ಳು ಹೇಳಿದ್ದಾಳೆ.

ಸೋಮವಾರ ಬ್ಯಾಂಕ್ ಬಳಿ ಬಂದ ಯುವತಿ ಫೋನ್ ಮಾಡಿ ಮಾಜಿ ಪ್ರಿಯಕರನ್ನು ಹೊರಗೆ ಕರೆದಿದ್ದಾಳೆ. ನಂತ್ರ ಆತನಿಗೆ ಹೊಡೆದು ಭಾವಿ ಪತಿ ಮುಂದೆ ನಾಟಕವಾಡಿದ್ದಾಳೆ. ಯುವತಿ ಮಾತನ್ನು ನಂಬಿದ ಭಾವಿ ಪತಿ ಹಾಗೂ ಸಾರ್ವಜನಿಕರು ಈತನಿಗೆ ಥಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...