alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆಯಿಲ್ಲದೆ ರಕ್ತ ಸುರಿಸುತ್ತ ಅರ್ಧ ಕಿಲೋಮೀಟರ್ ಓಡಿದ್ಲು ಮಹಿಳೆ

ಮಧ್ಯಪ್ರದೇಶದ ಬುರ್ಹಾನಪುರ್ ನಲ್ಲಿ ತೋಟದ ಕೆಲಸ ಮಾಡ್ತಿದ್ದ ಮಹಿಳೆ ಮೇಲೆ ಜೈಲಿನಿಂದ ಹೊರ ಬಂದ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಆಕೆ ಕೆಲಸ ಮಾಡ್ತಿದ್ದ ಸ್ಥಳಕ್ಕೆ ಬಂದ ರಾಮ್ಜಾನ್ ಎಂಬಾತ ಮೈಮೇಲಿನ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾನೆ. ಸುಮಾರು 20 ನಿಮಿಷಗಳ ಕಾಲ ಪ್ರಾಣ ರಕ್ಷಣೆಗಾಗಿ ಹೋರಾಡಿದ ಮಹಿಳೆ ನಂತ್ರ ರಕ್ತ ಸುರಿಸುತ್ತ ವಿವಸ್ತ್ರವಾಗಿ ಓಡಿ ಬಂದಿದ್ದಾಳೆ.

ಸುಮಾರು ಅರ್ಧ ಕಿಲೋಮೀಟರ್ ಬಟ್ಟೆಯಿಲ್ಲದೆ ರಕ್ತ ಸುರಿಸುತ್ತ ಓಡಿದ ಮಹಿಳೆ ಇನ್ನೊಂದು ತೋಟದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯರ ಕಣ್ಣಿಗೆ ಬಿದ್ದಿದ್ದಾಳೆ. ಪೀಡಿತೆಗೆ ರಕ್ಷಣೆ ನೀಡಿದ ಮಹಿಳೆಯರು ಆಕೆಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಮ್ಜಾನ್ ಅನೇಕ ದಿನಗಳಿಂದ ಪೀಡಿತ ಮಹಿಳೆಗೆ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಐದು ವರ್ಷಗಳ ಹಿಂದೆ ಪತಿ ಕಳೆದುಕೊಂಡಿದ್ದ ಮಹಿಳೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಾಡಿನ ಸೊಪ್ಪು ತಂದು ಪಟ್ಟಣದಲ್ಲಿ ಮಾರುತ್ತಿದ್ದಳು. ಆಕೆಯನ್ನು ಕಾಡಿನಲ್ಲಿ ನೋಡಿದ ರಾಮ್ಜಾನ್ ಹಿಂಸೆ ನೀಡಲು ಶುರುಮಾಡಿದ್ದ.

ಈ ಬಗ್ಗೆ ಐದಾರು ಬಾರಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಳಂತೆ. ಪ್ರತಿ ಬಾರಿಯೂ ಮಹಿಳೆ ದೂರನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ರಾಮ್ಜಾನ್ ನನ್ನು ಜೈಲಿನಲ್ಲಿಟ್ಟಂತೆ ಮಾಡಿ ಬಿಡುಗಡೆ ಮಾಡುತ್ತಿದ್ದರು ಎನ್ನಲಾಗಿದೆ. ಮಹಿಳೆ ಸಂಬಂಧ ಬೆಳೆಸಲು ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಆರೋಪಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಹಿಳೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...