alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದವನ ಅರೆಸ್ಟ್

ಮುಂಬೈ ಲೋಕಲ್ ಟ್ರೈನ್ ನಲ್ಲಿ 22 ವರ್ಷದ ಯುವತಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪೊಲೀಸರು 26 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅಯಾಜ್ ಸಟ್ಟರ್ ಖುರೇಷಿ ಎಂದು ಗುರುತಿಸಲಾಗಿದೆ. ಯುವತಿ ತೆಗೆದುಕೊಂಡಿದ್ದ ಮೊಬೈಲ್ ಫೋಟೋಗಳು ಮತ್ತು ಹಲವು ರೈಲ್ವೆ ನಿಲ್ದಾಣಗಳ ಸಿಸಿ ಟಿವಿ ಫುಟೇಜ್ ಗಳನ್ನ ಆಧರಿಸಿ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮುಂಬೈನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಯುವತಿ, ಸೆಪ್ಟೆಂಬರ್ 11 ರಂದು ತನ್ನ ಯುರೋಪಿಯನ್ ಸಹಪಾಠಿ ಜೊತೆ ಚರ್ಚೆಯಲ್ಲಿ ತೊಡಗಿದ್ದಳು. ಈ ವೇಳೆ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ.

ಈ ಬಗ್ಗೆ ಯುವತಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಳು. ಲೈಂಗಿಕ ದೌರ್ಜನ್ಯ ನಡೆದ ಸಂದರ್ಭದಲ್ಲಿ ಆತನನ್ನು ಹಿಡಿಯೋಕೆ ನೋಡಿದ್ರೆ ಜನ ಜಂಗುಳಿಯ ಮಧ್ಯೆ ಆತ ತಪ್ಪಿಸಿಕೊಂಡು ಬಿಟ್ಟ. ಆನಂತರದಲ್ಲಿ ಯುವತಿ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದುಕೊಂಡಿದ್ದಳು. ಹಾಗಾಗಿ ಪೊಲೀಸರು ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನ ಮೇಲೆ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...