alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಯರ ಕೊಠಡಿಗೆ ಬೆಳಕು ಬೀರುತ್ತಿದ್ದ ನೀಚ

ಉದ್ದೇಶಪೂರ್ವಕವಾಗಿ ಅಪ್ರಾಪ್ತ ಬಾಲಕಿಯರು ವಾಸವಿದ್ದ ಕೋಣೆಯ ಕಿಟಕಿಯ ಮೇಲೆ ಫ್ಲ್ಯಾಷ್ ಹಾಕುತ್ತಿದ್ದ ವ್ಯಕ್ತಿ ವಿರುದ್ದ ಪೊಲೀಸರು ಪೋಸ್ಕೋ ಕಾಯ್ದೆ ದಾಖಲಿಸಿದ್ದಾರೆ. ಥಾನೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಬ್ರಾ ಬಳಿ ಈ ಘಟನೆ ನಡೆದಿದೆ.

ಬಾಲಕಿಯರು ವಾಸವಿದ್ದ ಎದುರು ಮನೆಯಲ್ಲಿ ಅನ್ಸಾರಿ ಎಂಬ 50 ವರ್ಷದ ವ್ಯಕ್ತಿ ವಾಸವಿದ್ದ. 8 ರಿಂದ 9 ವರ್ಷ ವಯೋಮಾನದ ಬಾಲಕಿಯರು ಅನ್ಸಾರಿ ಎದುರು ಮನೆಯಲ್ಲಿ ನೆಲೆಸಿದ್ದಾರೆ. ಅನ್ಸಾರಿ ಆಗಾಗ್ಗೆ ಫ್ಲ್ಯಾಷ್ ಹಾಕುವ ಬಗ್ಗೆ ಬಾಲಕಿಯರು ತಮ್ಮ ಪೋಷಕರಿಗೆ ತಿಳಿಸಿದ್ದರು.

ಆನಂತರದಲ್ಲಿ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನ್ಸಾರಿ ಫ್ಲ್ಯಾಷ್ ಹಾಕೋದಷ್ಟೆ ಅಲ್ಲ. ಆಗಾಗ್ಗೆ ಬಾಲಕಿಯರ ಫೋಟೋ ತೆಗೀತಿದ್ದ ಅಂತಲೂ ದೂರು ನೀಡಲಾಗಿದೆ.

ಅನ್ಸಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರಾದರೂ ಬಳಿಕ ಆತ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದು, ಅವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಪೋಸ್ಕೋ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳನ್ನ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...