alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಎದುರಲ್ಲೇ ತಂದೆ ಮಾಡಿದ್ದಾನೆ ಪಾಪಿ ಕೃತ್ಯ

ದೆಹಲಿಯ ಜಹಾಂಗಿರ್ಪುರಿ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಮಕ್ಕಳ ಎದುರಲ್ಲೇ ಪತ್ನಿ ಮತ್ತು ಒಬ್ಬ ಮಗನನ್ನು ಹತ್ಯೆ ಮಾಡಿದ್ದಾನೆ. ಪತ್ನಿ ಸುನೀತಾ ಹಾಗೂ 18 ತಿಂಗಳ ಪುಟ್ಟ ಕಂದಮ್ಮನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಂದಿದ್ದಾನೆ.

2005ರಲ್ಲಿ ಸುನೀತಾಗೆ ಪ್ರಕಾಶ್ ಜೊತೆ ಮದುವೆಯಾಗಿತ್ತು. ಆಗಿನಿಂದ್ಲೂ ದಂಪತಿ ಜಗಳವಾಡುತ್ತಿದ್ರು. ಪ್ರಕಾಶ್ ವಿರುದ್ಧ ಸುನೀತಾ ವರದಕ್ಷಿಣೆ ಕಿರುಕುಳ ದೂರನ್ನೂ ದಾಖಲಿಸಿದ್ಲು. ಆ ಕೇಸ್ ಇನ್ನೂ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಒಂದು ವರ್ಷ ಸುನೀತಾ ಪತಿಯಿಂದ ದೂರವಿದ್ಲು. ಇತ್ತೀಚೆಗಷ್ಟೆ ಮತ್ತೆ ಗಂಡನ ಮನೆಗೆ ವಾಪಸ್ಸಾಗಿದ್ಲು.

ಪ್ರಕಾಶ್ ಸಹೋದರ ಮನೆಗೆ ಬಂದಿದ್ದ. ಎಷ್ಟು ಬಾಗಿಲು ಬಡಿದರೂ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ಒಳಗೆ ಬಂದಿದ್ದಾನೆ. ಆಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. 7 ಹಾಗೂ 4 ವರ್ಷದ ಮಕ್ಕಳು ಕೂಡ ತಾಯಿ ಹಾಗೂ ಪುಟ್ಟ ಮಗುವಿನ ಶವದೊಂದಿಗೆ ಒಳಗಡೆಯೇ ಕುಳಿತಿದ್ರು. ತಂದೆ ಮಾಡಿದ ಭೀಬತ್ಸ್ಯ ಕೃತ್ಯವನ್ನು ನೋಡಿ ಹೆದರಿದ್ದ ಮಕ್ಕಳು ಯಾರಿಗೂ ವಿಷಯ ತಿಳಿಸಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...