alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿತ ಬೇಡ ಎಂದಿದ್ದಕ್ಕೆ ಪತ್ನಿಯ ಮೂಗನ್ನೇ ಕತ್ತರಿಸಿದ

ಕುಡಿಯೋದು ಬೇಡ ಎಂದಿದ್ದಕ್ಕೆ ಕುಡುಕ ಪತಿಯೊಬ್ಬ ಪತ್ನಿಯ ಮೂಗನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಶಹಜಾನ್ಪುರದ ಬಹದೂರಪುರ ಎಂಬಲ್ಲಿ ರಾಜೇಶ್ ಕುಮಾರ್ ಎಂಬವ ಕುಡಿತದ ದಾಸನಾಗಿದ್ದ. ದಿನವೂ ಕುಡಿದು ಬರುತ್ತಿದ್ದ ಗಂಡನ ವಿರುದ್ಧ ಪತ್ನಿ 35 ವರ್ಷದ ಸಂಗೀತಾ ಸಿಡಿದೆದ್ದಿದ್ದಳು. ಕುಡಿತದ ವಿಷಯವಾಗಿ ಗಂಡ-ಹೆಂಡತಿ ಮಧ್ಯೆ ಪ್ರತಿನಿತ್ಯ ಗಲಾಟೆ ನಡೆದೇ ಇರುತ್ತಿತ್ತು. ಆದರೆ ನಿನ್ನೆ ಆಗಿದ್ದೇ ಬೇರೆ.

ಕಂಠಪೂರ್ತಿ ಕುಡಿದು ಬಂದಿದ್ದ ರಾಜೇಶ, ಕುಡಿತದ ವಿರುದ್ಧ ಮಾತನಾಡಿದ ಸಂಗೀತಾಳ ಮೂಗನ್ನೇ ಕತ್ತರಿಸಿಬಿಟ್ಟಿದ್ದ. ತಕ್ಷಣವೇ ಸಂಗೀತಾಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ. ಪೊಲೀಸರು ರಾಜೇಶ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದು, ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...