alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ನಾಯಿಯನ್ನೂ ಬಿಟ್ಟಿಲ್ಲ ಕಾಮುಕ

ದೆಹಲಿಯ ನಾರಾಯಣನಗರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ಟ್ಯಾಕ್ಸಿ ಚಾಲಕನೊಬ್ಬ ಮನುಕುಲ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ. ನಾಯಿಮರಿ ಜೈನಿಗೆ ಶೋಷಣೆ ನೀಡಿದ್ದಾನೆ. ಘಟನೆ ನಂತ್ರ ನಾಯಿಮರಿ ಸಾವನ್ನಪ್ಪಿದೆ.

ಈ ಘಟನೆ ನಡೆದಿರೋದು ಆಗಸ್ಟ್ 25ರಂದು. ಘಟನೆ ನಂತ್ರ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಸದ್ಯ ಆರೋಪಿಗೆ ಜಾಮೀನು ಸಿಕ್ಕಿದೆ.

ಮಾಹಿತಿ ಪ್ರಕಾರ, ದೆಹಲಿ ನಾರಾಯಣಪುರ ನಿವಾಸಿ ಅಭಿಷೇಕ್ ನಾಯಿಯನ್ನು ಸಾಕಿದ್ದ. ನಾಯಿಗೆ ಆಹಾರ ನೀಡ್ತಿದ್ದ. ಆಗಸ್ಟ್ 25ರ ನಂತ್ರ ಆತನಿಗೆ ಜೈನಿ ಕಂಡಿರಲಿಲ್ಲವಂತೆ. ಅಕ್ಕಪಕ್ಕದವರನ್ನು ಕೇಳಿದ್ದಾನೆ. ಆಗ ಟ್ಯಾಕ್ಸಿ ಚಾಲಕ ನಾಯಿ ಬಗ್ಗೆ ಮಾಹಿತಿ ನೀಡಿದ್ದಾನೆ. ಅಭಿಷೇಕ್ ಚಾಲಕನ ಜೊತೆ ನಾಯಿಯಿದ್ದ ಸ್ಥಳಕ್ಕೆ ಹೋಗಿದ್ದಾನೆ. ಕಾರ್ ನಲ್ಲಿ ಚಾಲಕ ಎಲ್ಲ ವಿಷ್ಯ ಹೇಳಿದ್ದಾನೆ. ನಾಯಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ತಿಳಿಸಿದ್ದಾನೆ.

ಅಭಿಷೇಕ್ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಲ್ಲದೆ ನಾಯಿಯನ್ನು ವೈದ್ಯರ ಬಳಿ ತೆಗೆದುಕೊಂಡು ಹೋಗಿದ್ದಾನೆ. ಆದ್ರೆ ನಾಯಿ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಶವ ಪರೀಕ್ಷೆ ನಡೆಸಿದ್ದಾರೆ. ನಾಯಿ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆದಿದೆ ಎಂದು ವರದಿ ಹೇಳಿದೆ. ಅಭಿಷೇಕ್ ಆರೋಪಿ ವಿರುದ್ಧ ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ ಜಾಮೀನು ಸಿಕ್ಕಿದೆ. ಆದ್ರೆ ಕಠಿಣ ಕ್ರಮಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...