alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪಿ ಕೋರ್ಟ್ ನಲ್ಲಿ ಮಾಡ್ದ ಇಂಥ ಕೆಲಸ

ಅಸ್ಸಾಂನ ದಿಬ್ರುಗಢ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿಯೇ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಕತ್ತರಿಸಿದ್ದಾನೆ. ಇಷ್ಟೇ ಅಲ್ಲ ಈ ಆರೋಪಿ ವಿರುದ್ಧ ಅಪ್ರಾಪ್ತ ಮಗಳನ್ನು ಅತ್ಯಾಚಾರವೆಸಗಿದ ಆರೋಪವಿದೆ.

ಸೆಪ್ಟೆಂಬರ್ 2017 ರಂದು ಪತ್ನಿ, ಆರೋಪಿ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಳು. ವಿಚಾರಣೆ ನಡೆಸಿದ್ದ ಕೋರ್ಟ್ 9 ತಿಂಗಳು ಐದು ದಿನಗಳ ಕಾಲ ಸೆಂಟ್ರಲ್ ಜೈಲಿನಲ್ಲಿ ಆರೋಪಿಯನ್ನಿಟ್ಟಿತ್ತು. ಜೂನ್ 6ರಂದು ಆರೋಪಿ ಜಾಮೀನಿನ ಮೇಲೆ ಹೊರ ಬಂದಿದ್ದ.

ಜೂನ್ 15ರಂದು ಅತ್ಯಾಚಾರ ಪ್ರಕರಣದ ವಿಚಾರಣೆಗಾಗಿ ಪತ್ನಿ ಹಾಗೂ ಕುಟುಂಬಸ್ಥರ ಜೊತೆ ಆರೋಪಿ ಕೋರ್ಟ್ ಗೆ ಬಂದಿದ್ದ. ಕೋರ್ಟ್ ಬೆಂಚ್ ಮೇಲೆ ಕುಳಿತಿದ್ದ ಆರೋಪಿ ಏಕಾಏಕಿ ಕಿಸೆಯಿಂದ ಚಾಕು ತೆಗೆದು ಪತ್ನಿ ಕತ್ತು ಕೊಯ್ದಿದ್ದಾನೆ. ಪತ್ನಿ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...