alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಾಯದ ನೆಪದಲ್ಲಿ ಹಣ ಎಗರಿಸಿದ ಮಹಿಳಾ ಪೇದೆ

ಇದು ಬೇಲಿಯೇ ಎದ್ದು ಹೊಲ ಮೇಯ್ದ ಘಟನೆ. ಎರಡು ದ್ವಿಚಕ್ರವಾಹನಗಳು ಪರಸ್ಪರ ಡಿಕ್ಕಿ ಹೊಡೆದ ವೇಳೆ ಅವರಿಗೆ ಸಹಾಯ ಮಾಡಲು ಬಂದ ಮಹಿಳಾ ಪೊಲೀಸ್ ಪೇದೆ ಪರಿಸ್ಥಿತಿಯ ದುರ್ಲಾಭ ಪಡೆದು ಹಣ ಎಗರಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಪ್ರಣಿತ ನಂದಕಿಶೋರ್ ಬೇಂದ್ರೆ ಎಂಬ ಎಂಬಿಎ ವಿದ್ಯಾರ್ಥಿನಿ ಬ್ಯಾಂಕ್ ಗೆ 50,000 ರೂ. ಹಣ ಕಟ್ಟಲೆಂದು ತನ್ನ ತಂದೆಯ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತಾಲೆಗಾಂವ್ ಡಾಬಡೆ ಪೊಲೀಸ್ ಠಾಣೆ ವ್ಯಾಪ್ತಿಯ ಪುಣೆ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಎರಡೂ ವಾಹನಗಳ ಸವಾರರು ಗಾಯಗೊಂಡಿದ್ದು, ಸ್ಥಳೀಯ ಪೊಲೀಸ್ ಠಾಣೆಯ ಪೇದೆ ಸ್ವಾತಿ ಜಾಧವ್ ಇವರುಗಳು ಸಹಾಯಕ್ಕೆ ಧಾವಿಸಿದ್ದಾರೆ. ಪ್ರಣಿತ ಮತ್ತವರ ತಂದೆಯನ್ನು ಠಾಣೆಗೆ ಕರೆದೊಯ್ದ ಸ್ವಾತಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಲು ಹೇಳಿದ್ದಾರೆ. ಹಣವಿದ್ದ ಬ್ಯಾಗನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಇಡುವಂತೆ ಸೂಚಿಸಿದ್ದು, ಅದರಂತೆ ಬ್ಯಾಗ್ ನ್ನು ಇಟ್ಟ ಪ್ರಣಿತ, ತಂದೆಯೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ.

ಚಿಕಿತ್ಸೆ ಪಡೆದು ವಾಪಸ್ ಬಂದ ತಂದೆ-ಮಗಳು ಡಿಕ್ಕಿ ತೆಗೆದು ನೋಡಿ ಹೌಹಾರಿದ್ದಾರೆ. ಹಣವಿದ್ದ ಬ್ಯಾಗ್ ಅದರಲ್ಲಿರಲಿಲ್ಲವೆನ್ನಲಾಗಿದ್ದು, ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ವಾಹನದಿಂದಲೇ ಹಣ ಕಳುವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಸಿಸಿ ಟಿವಿ ದೃಶ್ಯ ಪರಿಶೀಲಿಸಿ ಶಾಕ್ ಗೊಳಗಾಗಿದ್ದಾರೆ. ಮಹಿಳಾ ಪೇದೆ ಸ್ವಾತಿ ಜಾದವ್ ಹಣವಿದ್ದ ಬ್ಯಾಗ್ ಎಗರಿಸಿರುವುದು ಅದರಲ್ಲಿ ಸೆರೆಯಾಗಿದ್ದು, ಆಕೆಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪುಣೆ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...