alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಮಾರಾಟ ಮಾಡಿದ್ದವಳನ್ನು ಇರಿದು ಕೊಂದ ಮಹಿಳೆ

ದ್ವಿಚಕ್ರ ವಾಹನವೊಂದರ ಮಾರಾಟದ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ನಡೆದ ಜಗಳವು ಒಬ್ಬಾಕೆಯ ಕೊಲೆಯೊಂದಿಗೆ ಅಂತ್ಯಗೊಂಡ ದಾರುಣ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ.

ಶಕೀಲಾ ಶೇಖ್‌ (32) ಎಂಬಾಕೆಗೆ ತಮ್ಮ ಮೊಪೆಡ್‌ ಮಾರಾಟ ಮಾಡಿದ್ದ ವಿದ್ಯಾ ಚಂದ್ರಕಾಂತ್‌ ತಲೇಕರ್‌ (29), ಶೇಖ್‌ರ ಮನೆಗೆ ತೆರಳಿ ಹಣ ಪಡೆದುಕೊಳ್ಳಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಕಚ್ಚಾಟ ಆರಂಭಗೊಂಡಿದೆ.

ನೋಡ ನೋಡುತ್ತಿದ್ದಂತೆಯೇ ಚಾಕುವನ್ನು ಆಚೆ ತೆಗೆದ ಶಕೀಲಾ ಶೇಖ್‌, ವಿದ್ಯಾ ತಲೇಕರ್‌ಗೆ ಇರಿದಿದ್ದಾರೆ. ಇದಾದ ಬಳಿಕ ಖುದ್ದು ಆಪಾದಿತೆಯೇ ತಲೇಕರ್‌ರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವ ಮುನ್ನವೇ ತಲೇಕರ್‌ ಮೃತಪಟ್ಟಿದ್ದಾರೆ. ಶಕೀಲಾ ಶೇಖ್‌ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...