alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೊಬ್ಬನ ಜೊತೆ ಮಲಗಿದ್ದ ಪುರುಷ ಸಂಗಾತಿ ನೋಡಿ ವ್ಯಾಘ್ರನಾದ ಸಂಗಾತಿ

ಮುಂಬೈನ ಉಪನಗರ ಬಾಂದ್ರಾದಲ್ಲಿ ಹತ್ಯೆ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. 25 ವರ್ಷದ ದವಲ್ ಆರೋಪಿ. ಈತ ಪಾರ್ಥ ರಾವಲ್ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾನೆ. ಪಾರ್ಥ ರಾವಲ್, ದವಲ್ ಪುರುಷ ಸಂಗಾತಿ ಜೊತೆಗಿದ್ದನಂತೆ.

ರಾವಲ್ ಎಂಬಿಎ ಓದಿದ್ದಾನೆ. ಆತನನ್ನು ದವಲ್ ತನ್ನ ಪುರುಷ ಸಂಗಾತಿ ಜೊತೆ ನೋಡಿದ್ದಾನೆ. ಇದ್ರಿಂದ ಕೋಪಗೊಂಡ ದವಲ್, ಪಾರ್ಥ ರಾವಲ್ ಮೇಲೆ ಮೇಣದ ಬತ್ತಿ ಸ್ಟ್ಯಾಂಡ್ ನಿಂದ ಹಲ್ಲೆ ನಡೆಸಿದ್ದಾನೆ. ರಾವಲ್ ಅಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ದವಲ್ ತನ್ನ ಪುರುಷ ಸಂಗಾತಿ ಹತ್ಯೆಗೂ ಯತ್ನ ನಡೆಸಿದ್ದಾನೆ. ಮೊಬೈಲ್ ಚಾರ್ಜರ್ ನಿಂದ ಕತ್ತು ಹಿಸುಕುವ ಯತ್ನ ನಡೆಸಿದ್ದಾನೆ.

ದವಲ್ ಸಂಗಾತಿ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...