alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಕ್ಕೆ ಕುತ್ತು ತಂತು ಲೈಂಗಿಕ ಶಕ್ತಿ ಹೆಚ್ಚಿಸುವ ಇಂಜೆಕ್ಷನ್

ಮಹಾರಾಷ್ಟ್ರದ ಭಿವಂಡಿಯಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವ ಇಂಜೆಕ್ಷನ್ ಯುವತಿಯ ಪ್ರಾಣ ತೆಗೆದಿದೆ. ಔಷಧಿ ಪ್ರಮಾಣ ಹೆಚ್ಚಿದ್ದ ಕಾರಣ ಯುವತಿ ಸಾವನ್ನಪ್ಪಿದ್ದಾಳೆ. ಹೊಟೇಲ್ ಒಂದರ ಕೋಣೆಯಲ್ಲಿ ಯುವತಿ ಶವ ಸಿಕ್ಕಿದೆ. ಇಂಜೆಕ್ಷನ್ ನಂತ್ರ ಯುವತಿ ಆರೋಗ್ಯದಲ್ಲಿ ಏರುಪೇರಾಗಿದೆ. ಇದ್ರಿಂದ ಹೆದರಿದ ಪ್ರೇಮಿ ಯುವತಿಯನ್ನು ಹೊಟೇಲ್ ರೂಮಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಅಮೃತನಗರದ ನಿವಾಸಿ 28 ವರ್ಷದ ಯುವತಿ ತನ್ನ ಪ್ರೇಮಿ ಜೊತೆ ಭಿವಂಡಿಗೆ ಬಂದಿದ್ದಳು. ಹೊಟೇಲ್ ನಲ್ಲಿ ರೂಂ ಪಡೆದಿದ್ದರು. ಯುವತಿ ಲೈಂಗಿಕ ಶಕ್ತಿ ಹೆಚ್ಚಾಗುವ ಇಂಜೆಕ್ಷನ್ ಪಡೆದಿದ್ದಾಳೆ.ಅದು ಓವರ್ ಡೋಸ್ ಆಗಿದ್ದರಿಂದ ಯುವತಿ ಆರೋಗ್ಯದಲ್ಲಿ ಏರುಪೇರಾಗಿದೆ.

ಯುವತಿಯನ್ನು ಅಲ್ಲಿಯೇ ಬಿಟ್ಟು ಪ್ರೇಮಿ ಓಡಿ ಹೋಗಿದ್ದಾನೆ. ಕೆಲ ಸಮಯದ ನಂತ್ರ ರೂಂ ಸರ್ವಿಸ್ ಗೆ ಬಂದ ಸಿಬ್ಬಂದಿಗೆ ಪ್ರಜ್ಞೆ ತಪ್ಪಿ ಬಿದ್ದ ಯುವತಿ ಕಾಣಿಸಿದ್ದಾಳೆ. ತಕ್ಷಣ ಮ್ಯಾನೇಜರ್ ಗೆ ತಿಳಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಗೆ ಚಿಕಿತ್ಸೆ ವೇಳೆ ಪ್ರಜ್ಞೆ ಬಂದಿತ್ತು ಎನ್ನಲಾಗಿದೆ. ಈ ವೇಳೆ ಯುವತಿ ತನ್ನ ಹೆಸರು, ವಿಳಾಸ ಹೇಳಿದ್ದಾಳೆ. ಆದ್ರೆ ಕೆಲ ಸಮಯದ ಬಳಿಕ ಸಾವನ್ನಪ್ಪಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...