alex Certify
ಕನ್ನಡ ದುನಿಯಾ       Mobile App
       

Kannada Duniya

ಬಲವಂತವಾಗಿ ಲವ್ ಲೆಟರ್ ಕೊಟ್ಟಿದ್ದ ಯುವಕನಿಗೆ ಜೈಲು

ಮಹಾರಾಷ್ಟ್ರದಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದು, ಅವಳ ಕೈಹಿಡಿದಿದ್ದಲ್ಲದೆ ಒತ್ತಾಯಪೂರ್ವಕವಾಗಿ ಪ್ರೇಮ ಪತ್ರ ನೀಡಿದ 21 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

8 ತರಗತಿಯ ಆ ವಿದ್ಯಾರ್ಥಿನಿಗೆ ಸುಮಾರು ಒಂದು ತಿಂಗಳಿನಿಂದ ಯುವಕ ಕಾಟ ಕೊಡುತ್ತಿದ್ದ. ಅಹ್ಮದ್ ನಗರ ಜಿಲ್ಲೆಯಲ್ಲಿ 2013ರಲ್ಲಿ ನಡೆದ ಘಟನೆ ಇದು. ಬಾಲಕಿಯ ಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದ ಯುವಕ ತನ್ನನ್ನು ಪ್ರೀತಿಸುವಂತೆ ಅವಳನ್ನು ಪೀಡಿಸುತ್ತಿದ್ದ. ಒಮ್ಮೆ ಶಾಲೆಯ ಗೇಟ್ ಬಳಿ ಬಂದು ಅವಳನ್ನು ಎಳೆದು ಒತ್ತಾಯಪೂರ್ವಕವಾಗಿ ಲವ್ ಲೆಟರ್ ಕೊಟ್ಟಿದ್ದ.

ತನ್ನನ್ನು ಪ್ರೀತಿಸದೇ ಇದ್ರೆ ನಿನ್ನ ಸಹೋದರನನ್ನು ಕೊಂದು ಬಿಡ್ತೇನೆ ಅಂತಾ ಬೆದರಿಕೆ ಕೂಡ ಹಾಕಿದ್ದ. ಮತ್ತೆ ಮತ್ತೆ ಇದೇ ಕೃತ್ಯವನ್ನು ಯುವಕ ಮುಂದುವರಿಸಿದ್ದರಿಂದ ಕೊನೆಗೆ ಬಾಲಕಿ ಆತ ಕೊಟ್ಟಿದ್ದ ಪ್ರೇಮಪತ್ರವನ್ನು ತನ್ನ ತಾಯಿಗೆ ನೀಡಿದ್ದಳು. ವೈಯಕ್ತಿಕ ದ್ವೇಷದಿಂದ ಯುವಕನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಅಂತಾ ಆತನ ಪರ ವಕೀಲರು ವಾದಿಸಿದ್ದರು. ಆದ್ರೆ ಅದನ್ನು ತಿರಸ್ಕರಿಸಿದ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...