alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಕಾಮುಕ ಅರೆಸ್ಟ್

cow 28

ಭೂಪಾಲ್: ಕಾಮುಕರಿಗೆ ಕಣ್ಣಿಲ್ಲ ಎನ್ನುತ್ತಾರೆ. ಅಲ್ಲದೇ, ಕಾಮದ ಮದವೇರಿದವನಿಗೆ, ನಾಚಿಕೆ, ಭಯ ಎಂಬುದೇ ಇರಲ್ಲ ಎಂದೂ ಹೇಳುತ್ತಾರೆ. ಈ ಮಾತಿಗೆ ಪೂರಕ ಎನ್ನಬಹುದಾದ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ವಿಪರೀತ ಮದ್ಯ ಸೇವಿಸಿದ್ದ ಕಾಮುಕನೊಬ್ಬ ತನ್ನ ಕಾಮದ ತೃಷೆ ತೀರಿಸಿಕೊಳ್ಳಲು ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಮಧ್ಯಪ್ರದೇಶದ ಬಿತೋಲ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 50 ವರ್ಷ ವಯಸ್ಸಿನ ಶ್ರವಣ್ ವ್ಯಾಸ್ ಎಂಬ ಕಾಮುಕ, ಫುಲ್ ಟೈಟಾಗಿ ಮನೆಗೆ ಬಂದಿದ್ದು, ಸಮೀಪದಲ್ಲಿದ್ದ ಹಸುವಿನ ಮೇಲೆ ಎರಗಿದ್ದಾನೆ. ಹಸುವಿನೊಂದಿಗೆ ಅನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸಿ, ತನ್ನ ಕಾಮದ ತೃಷೆ ತೀರಿಸಿಕೊಂಡಿದ್ದಾನೆ. ಮಾರ್ಚ್ 19ರಂದು ಇಂತಹುದೇ ಘಟನೆ ನಡೆದಿದ್ದು, ಇದು ಎರಡನೇ ಪ್ರಕರಣವಾಗಿದೆ.

ಈತನ ಕಾಮದ ಆಟವನ್ನು ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿ ಶ್ರವಣ್ ವ್ಯಾಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 377ರ ಅಡಿ ಶ್ರವಣ್ ವ್ಯಾಸ್ ವಿರುದ್ಧ ಕೇಸ್ ದಾಖಲಿಸಿಕೊಂಡು, ಆತನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...