alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನೇ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಿದ ಪಾಪಿ

ಸ್ನೇಹಿತರೊಂದಿಗೆ ಸೇರಿ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿದ ಹೀನ ಕೃತ್ಯ ಲಖ್ನೌದ ಸೀತಾಪುರ ಜಿಲ್ಲೆಯ ಕಮಲಾಪುರದಲ್ಲಿ ನಡೆದಿದೆ.

ಏಪ್ರಿಲ್ 15 ರಂದು ಜಾತ್ರೆಗೆಂದು ಬಂದಿದ್ದ 35 ವರ್ಷದ ಮಗಳನ್ನು ತಂದೆಯೆನಿಸಿಕೊಂಡವನು ತನ್ನ ಸ್ನೇಹಿತರಿಗೆ ಪರಿಚಯ ಮಾಡಿಸಿ, ಆತನ ಜೊತೆ ಬೈಕ್ ನಲ್ಲಿ ಹೋಗು ಮನೆಗೆ ಬಿಡುತ್ತಾನೆಂದು ಹೇಳಿದ್ದಕ್ಕೆ ಆಕೆ ಹೊರಟಿದ್ದಾಳೆ.

ಆದರೆ ಆ ಕಾಮುಕ ಆಕೆಯನ್ನು ಕರೆದುಕೊಂಡು ತನ್ನ ಮತ್ತೊಬ್ಬ ಸ್ನೇಹಿತನ ಮನೆಗೆ ಹೋಗಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ. ದುರ್ದೈವವೆಂದರೆ ಆಕೆ ತಂದೆಯೂ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾನೆ.

18 ತಾಸುಗಳ ಬಳಿಕ ಆಕೆ ಹೇಗೋ ತಪ್ಪಿಸಿಕೊಂಡು ಬಂದು ತಾಯಿಗೆ ವಿಷಯ ಹೇಳಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಮೀರಜ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು, ಆಕೆಯ ತಂದೆ ಹಾಗೂ ಮಾನ್ ಸಿಂಗ್ ಎಂಬುವವರು ತಪ್ಪಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...