alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧ ಹೊಂದಿದ್ದವನಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ಮದುವೆಯಾಗಿ 9 ವರ್ಷದ ಪುತ್ರನನ್ನು ಹೊಂದಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕ ಆಘಾತಕಾರಿ ಕೃತ್ಯವೆಸಗಿದ್ದಾನೆ.

ಹೊಸಕೋಟೆ ಸಮೀಪದ ಅತ್ತಿವಟ್ಟ ಗ್ರಾಮದ ನಿವಾಸಿ ರಾಮಮೂರ್ತಿ ಇಂತಹ ಕೃತ್ಯವೆಸಗಿದ ಆರೋಪಿ. ಗಂಡನಿಂದ ದೂರವಾಗಿದ್ದ ಮಹಿಳೆ ರಾಮಮೂರ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ನಡುವೆ ರಾಮಮೂರ್ತಿಗೆ ಮದುವೆ ಮಾಡಲು ಪೋಷಕರು ಮುಂದಾಗಿದ್ದಾರೆ.

ಮದುವೆಗೆ ಪ್ರಿಯತಮೆ ಮತ್ತು ಆಕೆಯ ಪುತ್ರ ಅಡ್ಡಿಯಾಗ್ತಾರೆ ಎಂದು ಭಾವಿಸಿದ ರಾಮಮೂರ್ತಿ, ಇಬ್ಬರನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.

ವಾಗಟ ಗ್ರಾಮದ ಬಳಿ ಕತ್ತುಹಿಸುಕಿ ಬಾಲಕನನ್ನು ಕೊಲೆ ಮಾಡಿ, ಪ್ರಿಯತಮೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸೇರಿದ್ದಾಳೆ.

ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಇದೆಲ್ಲಾ ಮಾಹಿತಿ ಗೊತ್ತಾಗಿದೆ. ಆರೋಪಿ ರಾಮಮೂರ್ತಿಯನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...