alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಯ ಹುಚ್ಚಾಟಕ್ಕೆ ದುರಂತ ಸಾವು ಕಂಡ ಯುವತಿ

fire 18 mn r

ಬೆಂಗಳೂರು: ಪ್ರೀತಿಸಿದ ಹುಡುಗಿ ಸದ್ಯಕ್ಕೆ ಮದುವೆ ಬೇಡ ಎಂದಿದ್ದಕ್ಕೆ ಆಕೆಯ ಮನೆಗೇ ಬೆಂಕಿ ಹಚ್ಚಿದ್ದ ಪ್ರಕರಣ ದುರಂತ ಅಂತ್ಯ ಕಂಡಿದೆ. ಕಳೆದ 6 ದಿನಗಳಿಂದ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವತಿ ಮೇಘನಾ ಮೃತಪಟ್ಟಿದ್ದಾಳೆ.

ಬೆಂಗಳೂರಿನ ಶ್ರೀರಾಮಪುರ ನಿವಾಸಿ ದೀಪಕ್ ಎಂಬ ಯುವಕ ಕಳೆದ ಮಾರ್ಚ್ 12ರಂದು, ಪ್ರೀತಿಸುತ್ತಿದ್ದ ಯುವತಿ ಸದ್ಯಕ್ಕೆ ಮದುವೆ ಬೇಡ ಎಂದ ಕಾರಣಕ್ಕೆ ಆಕ್ರೋಶಗೊಂಡು ಆಕೆಯ ಮನೆಗೆ ಬೆಂಕಿ ಹಚ್ಚಿದ್ದ. ಈ ದುರುಳ ಪ್ರಿಯತಮೆಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ ಕಾರಣ ಯುವತಿ ಮೇಘನಾ, ಆಕೆಯ ಸಹೋದರಿ ಹಾಗೂ ತಂದೆ, ತಾಯಿ ತೀವ್ರ ಸುಟ್ಟುಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಮೇಘನಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿ ದೀಪಕ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೇಘನಾ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆಕೆಯ ತಂದೆ, ತಾಯಿ, ಸಹೋದರಿ ಆಸ್ಪತ್ರೆಯಲ್ಲಿದ್ದು, ಪ್ರೇಮಿಯ ಹುಚ್ಚಾಟಕ್ಕೆ ಮೇಘನಾ ಬಲಿಯಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...