alex Certify
ಕನ್ನಡ ದುನಿಯಾ       Mobile App
       

Kannada Duniya

ರೆಸ್ಟೋರೆಂಟ್ ನಲ್ಲೇ ಕಾನೂನು ವಿದ್ಯಾರ್ಥಿಯ ಬರ್ಬರ ಹತ್ಯೆ

ಅಲಹಾಬಾದ್ ನ ರೆಸ್ಟೋರೆಂಟ್ ಒಂದರಲ್ಲಿ ಕಾನೂನು ವಿದ್ಯಾರ್ಥಿಯನ್ನು ಥಳಿಸಿ ಹತ್ಯೆ ಮಾಡಲಾಗಿದೆ. ವಿದ್ಯಾರ್ಥಿಯ ಕಾಲು ತಾಕಿದೆ ಅನ್ನೋ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಹಾಕಿ ಸ್ಟಿಕ್, ಪೈಪ್ ಮತ್ತು ಕಲ್ಲಿನಿಂದ ಥಳಿಸಿ ದಿಲೀಪ್ ಸರೋಜ್ ಎಂಬ ಯುವಕನನ್ನು ಕೊಂದು ಹಾಕಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲೂ ಸೆರೆಯಾಗಿದೆ. ದಾಳಿಯಿಂದ ಪ್ರಜ್ಞಾಹೀನನಾಗಿ ಬಿದ್ದಿದ್ದ ದಿಲೀಪ್, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಹತ್ಯೆಯ ದೃಶ್ಯವನ್ನು ದಾರಿಹೋಕನೊಬ್ಬ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ರೆಸ್ಟೋರೆಂಟ್ ನ  ಮಾಲೀಕ ಹಲ್ಲೆಕೋರರನ್ನು ತಡೆಯಲು ಯತ್ನಿಸಿದ್ದಾನೆ. ರೈಲ್ವೆ ಇಲಾಖೆ ನೌಕರ ವಿಜಯ್ ಶಂಕರ್ ಸಿಂಗ್ ಮತ್ತವನ ನಾಲ್ವರು ಸಹಚರರು ಈ ಹತ್ಯೆ ಮಾಡಿದ್ದಾರೆ.

ಘರ್ಷಣೆ ನಡೆಯುತ್ತಿರುವ ಸಂದರ್ಭದಲ್ಲಿ ರೆಸ್ಟೋರೆಂಟ್ ನ ಮ್ಯಾನೇಜರ್ ಸಹಾಯವಾಣಿಗೆ ಕರೆ ಮಾಡಿದ್ದರು. ಪೊಲೀಸರ ಪೆಟ್ರೋಲಿಂಗ್ ವಾಹನ ಘಟನೆ ನಡೆದ ಸ್ಥಳದಿಂದ 100 ಮೀಟರ್ ದೂರದಲ್ಲಿತ್ತು. ಆದ್ರೂ ಪೊಲೀಸರು ಯುವಕನನ್ನು ಬಚಾವ್ ಮಾಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...