alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ಜಾಲದಿಂದ ಪಾರಾದ ಮಹಿಳೆ

ದೆಹಲಿ ಗೋವಿಂದಪುರಿ ಪ್ರದೇಶದಲ್ಲಿ ಪಶ್ಚಿಮ ಬಂಗಾಳದ ಮಹಿಳೆಯನ್ನು ಕಟ್ಟಿ ಹಾಕಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆಗೆ ಹಿಂದಿ ಬರ್ತಿರಲಿಲ್ಲ. ಮಹಿಳೆ ಕೇವಲ ಬಂಗಾಳಿ ಮಾತನಾಡುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ಆಕೆ ಯಾರ ಬಳಿಯೂ ತನ್ನ ನೋವನ್ನು ಹೇಳಿಕೊಳ್ಳಲು ಆಗಿರಲಿಲ್ಲ.

ಕೆಲವು ತಿಂಗಳ ಹಿಂದೆ ಮಹಿಳೆಯೊಬ್ಬಳು ರಾಜು ಶೇಖ್ ಎಂಬಾತನಿಗೆ ಪೀಡಿತೆಯನ್ನು ಮಾರಿದ್ದಳಂತೆ. ಆತ ಕೆಲಸ ನೀಡುವ ನೆಪ ಹೇಳಿ ದೆಹಲಿಗೆ ಕರೆ ತಂದು ಮನೆಯಲ್ಲಿ ಕಟ್ಟಿ ಹಾಕಿದ್ದಾನೆ. ಆತ ಹಾಗೂ ಆತನ ಸ್ನೇಹಿತರು ನಿರಂತರವಾಗಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ.

ಕಳೆದ ಮಂಗಳವಾರ ಪೀಡಿತೆಯನ್ನು ರಾಜು ಶೇಖ್ ರಾಜಸ್ತಾನದ ಮಹಿಳೆಗೆ ಮಾರಾಟ ಮಾಡಿದ್ದನಂತೆ. ರಾಜಸ್ತಾನದಲ್ಲಿ ಮಹಿಳೆಯೊಬ್ಬಳಿಗೆ ಪೀಡಿತೆಯನ್ನು ಮಾರಾಟ ಮಾಡಲಾಗಿತ್ತಂತೆ. ನಂತ್ರ ಮಹಿಳೆ ಪೀಡಿತೆಯನ್ನು ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆಗೆ ನೂಕಲು ಯತ್ನಿಸಿದ್ದಳಂತೆ. ಅಲ್ಲಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದ ಮಹಿಳೆಯನ್ನು ಪೊಲೀಸರು ಗೋವಿಂದಪುರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...