alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ವಿದ್ಯಾರ್ಥಿ ಹೇಳಿದ್ದೇನು?

yotht-killa

ಕೋಟಾದಲ್ಲಿ ವಿದ್ಯಾರ್ಥಿಯೊಬ್ಬ ಚಂಬಲ್ ನದಿಗೆ ಹಾರಿ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಸಾವಿಗೂ ಮುನ್ನ ವಿಡಿಯೋವೊಂದನ್ನು ರೆಕಾರ್ಡ್ ಮಾಡಿರುವ ಪಿಯುಸಿ ವಿದ್ಯಾರ್ಥಿ, ಪೋಷಕರ ಕನಸನ್ನು ನನಸು ಮಾಡಲು ಶ್ರಮಪಡುವಂತೆ ತನ್ನ ಸಹೋದರನಿಗೆ ಮನವಿ ಮಾಡಿದ್ದಾನೆ. ಬಿಹಾರದ ರಾಧೋಪುರ ನಿವಾಸಿ ಅಮನ್ ಗುಪ್ತಾ ತೂಗು ಸೇತುವೆ ಮೇಲಿಂದ ಹಾರಿ ಸಾವಿಗೆ ಶರಣಾಗಿದ್ದಾನೆ.

NEET ಪರೀಕ್ಷೆಗೆ ಸಿದ್ಧವಾಗುತ್ತಿದ್ದ ಅಮನ್, ಕೋಟಾದ ಮಹಾವೀರನಗರ-2ನಲ್ಲಿ ಬಾಡಿಗೆ ಕೋಣೆಯಲ್ಲಿ ವಾಸವಾಗಿದ್ದ. ಪೋಷಕರ ನಿರೀಕ್ಷೆಯನ್ನು ಸಾಕಾರಗೊಳಿಸಲಾಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿರುವ ಅಮನ್, ಹೆತ್ತವರ ಬಳಿ ಕ್ಷಮೆ ಕೇಳಿದ್ದಾನೆ. ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಬಳಿಕ ನದಿಗೆ ಹಾರಿದ್ದಾನೆ. ಗುರುವಾರ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟ ಅಮನ್, ಸುಮಾರು 1 ಗಂಟೆ ವೇಳೆಗೆ ಸ್ನೇಹಿತರಿಗೆಲ್ಲ ಕರೆ ಮಾಡಿ ಸಾವಿನ ನಿರ್ಧಾರ ತಿಳಿಸಿದ್ದ.

ಸ್ನೇಹಿತರು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಧಾವಿಸಿ ಬರುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಂಜೆ ವೇಳೆಗೆ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೆಡಿಕಲ್ ಓದಬೇಕೆಂಬ ಹಂಬಲ ಹೊಂದಿದ್ದ ಅಮನ್, ಬುದ್ಧಿವಂತ ವಿದ್ಯಾರ್ಥಿ. ಇದಕ್ಕಾಗಿ ಕೋಚಿಂಗ್ ಕೂಡ ಪಡೆಯುತ್ತಿದ್ದ. ಕೋಟಾದಲ್ಲಿ ಮೆಡಿಕಲ್ ಕೋಚಿಂಗ್ ಪಡೆಯುತ್ತಿರುವ ಸುಮಾರು 10 ವಿದ್ಯಾರ್ಥಿಗಳು ಒತ್ತಡ ತಾಳಲಾರದೆ ಇಲ್ಲಿಯವರೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...