alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ತಿಗಾಗಿ ಮಗನನ್ನೇ ಬಿಡಲಿಲ್ಲ ಮಹಿಳೆ…!

ಕೇರಳದ ಕುರೀಪ್ಪಳ್ಳಿ ಎಂಬಲ್ಲಿ 14 ವರ್ಷದ ಜಿತು ಜಾಬ್ ಎಂಬ ಬಾಲಕನ ಮೃತದೇಹ ಪತ್ತೆಯಾಗಿತ್ತು. ಶವ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಹೆತ್ತ ತಾಯಿಯೇ ಆತನನ್ನು ಹತ್ಯೆ ಮಾಡಿ ಸುಟ್ಟು ಹಾಕಿರೋದು ಈಗ ಬಯಲಾಗಿದೆ. ಆರೋಪಿ ಜಯಾಳನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಆಸ್ತಿ ವಿಚಾರಕ್ಕೆ ಅಮ್ಮ-ಮಗನ ಮಧ್ಯೆ ಅಡುಗೆ ಮನೆಯಲ್ಲಿ ಜಗಳವಾಗಿತ್ತು. ಸಿಟ್ಟಿನಲ್ಲಿ ಜಯಾ ಶಾಲ್ ನಿಂದ ಮಗನ ಕತ್ತು ಹಿಸುಕಿ ಕೊಲೆ ಮಾಡಿಬಿಟ್ಟಿದ್ದಾಳೆ. ನಂತರ ಶವವನ್ನು ಸಮೀಪದ ತೋಟಕ್ಕೆ ಕೊಂಡೊಯ್ದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.

ಜಯಾಳ ಪತಿ ಜಾಬ್ ಜಿ ಜಾನ್ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡ್ತಾನೆ. ಮಗಳು ಬಿ ಎಸ್ ಸಿ ವಿದ್ಯಾರ್ಥಿನಿ. ಘಟನೆ ನಡೆದಾಗ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಮಗ ಮನೆಗೆ ಬಾರದ್ದನ್ನು ನೋಡಿ ಆತಂಕಗೊಂಡ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...