alex Certify
ಕನ್ನಡ ದುನಿಯಾ       Mobile App
       

Kannada Duniya

ನಿಲ್ಲಿಸಿದ್ದ ಬಸ್ ನಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ

ಕೋಲ್ಕತ್ತಾದಲ್ಲಿ ಪಾರ್ಕ್ ಮಾಡಿದ್ದ ಬಸ್ ಒಂದರಲ್ಲಿ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಬಸ್ ಕ್ಲೀನರ್ ಆಗಿರೋ 45 ವರ್ಷದ ವ್ಯಕ್ತಿ ಮಗುವಿನ ಮೇಲೆ ದೌರ್ಜನ್ಯ ನಡೆಸಿದ್ದಾನೆ. ಬಸ್ ಬಾಗಿಲನ್ನು ಬಂದ್ ಮಾಡಿಕೊಂಡು ಈ ಕೃತ್ಯ ಎಸಗಿದ್ದಾನೆ.

ಮಗುವಿನ ಸಹೋದರ ಹೊರಗಡೆ ಇದ್ದ, ಒಂದೇ ಸಮನೆ ಬಾಗಿಲು ಬಡಿಯುತ್ತಿದ್ದ, ತಂಗಿಯನ್ನು ಬಿಟ್ಟುಬಿಡುವಂತೆ ಅಂಗಲಾಚುತ್ತಿದ್ದ. ಆದರೂ ಕಾಮುಕ ಬಾಗಿಲು ತೆರೆಯದೇ ಇದ್ದಾಗ ಓಡಿ ಹೋಗಿ ತಾಯಿಗೆ ವಿಷಯ ತಿಳಿಸಿದ್ದಾನೆ. ಆಕೆ ನೆರೆಹೊರೆಯವರನ್ನೆಲ್ಲ ಸಹಾಯಕ್ಕೆ ಕರೆತಂದ್ಲು.

ಎಲ್ಲರೂ ಸೇರಿ ಕಾಮುಕನನ್ನು ಹಿಡಿದು ಥಳಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಣ್ಣ, ತಂಗಿ ಇಬ್ಬರೂ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ರು. ಚೆಂಡು ಆ ಬಸ್ ಬಳಿ ಬಿದ್ದಿದ್ದರಿಂದ ಅದನ್ನು ತರಲು ತೆರಳಿದ್ದಾರೆ.

ಈ ವೇಳೆ ಕಾಮಕ ಕ್ಲೀನರ್ ಮಗುವನ್ನು ಒಳಕ್ಕೆ ಎಳೆದುಕೊಂಡು ಬಾಗಿಲು ಹಾಕಿದ್ದಾನೆ. ಆರೋಪಿ ಮುನ್ನಾನನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ. ಮಗುವಿಗೆ ತೀವ್ರ ರಕ್ತಸ್ರಾವವಾಗಿದ್ದು, ಚೇತರಿಸಿಕೊಳ್ಳಲು ಸಮಯ ಬೇಕು ಅಂತಾ ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...